×
Ad

ಹಾಜಿ ಅಲಿ ದರ್ಗಾ ನವೀಕರಣ ಯೋಜನೆಗೆ 1.21 ಕೋಟಿ ರೂ. ದೇಣಿಗೆ ನೀಡಿದ ಅಕ್ಷಯ್ ಕುಮಾರ್

Update: 2024-08-08 19:03 IST

ಅಕ್ಷಯ್ ಕುಮಾರ್ | PC :  X \ @syk_8282

 

ಮುಂಬೈ: ಹಾಜಿ ಅಲಿ ದರ್ಗಾದ ನವೀಕರಣ ಯೋಜನೆಗೆ ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ 1.21 ಕೋಟಿ ರೂ. ದೇಣಿಗೆ ನೀಡಿದ್ದಾರೆ ಎಂದು ಮಸೀದಿಯ ಟ್ರಸ್ಟ್ ನ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಈ ವಿಷಯವನ್ನು ಹಾಜಿ ಅಲಿ ದರ್ಗಾದ ವ್ಯವಸ್ಥಾಪಕ ಟ್ರಸ್ಟಿ ಸುಹೈಲ್ ಖಂದ್ವಾನಿ ಅವರು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಈ ಐತಿಹಾಸಿಕ ದರ್ಗಾಗೆ ಭೇಟಿ ನೀಡಿ, ಛಾದರ್‌ ಅನ್ನೂ ಸಲ್ಲಿಸಿದ್ದ ಅಕ್ಷಯ್ ಕುಮಾರ್ ಅವರ ವಿಡಿಯೊವನ್ನು ಈ ಪೋಸ್ಟ್ ನೊಂದಿಗೆ ಖಂದ್ವಾನಿ ಹಂಚಿಕೊಂಡಿದ್ದಾರೆ.

“ಪ್ರಗತಿಯಲ್ಲಿರುವ ಹಾಜಿ ಅಲಿ ದರ್ಗಾದ ಒಂದು ವಿಭಾಗದ ನವೀಕರಣದ ಹೊಣೆಯನ್ನು ಹೊತ್ತುಕೊಂಡಿರುವ ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್, 1.21 ಕೋಟಿ ರೂ. ಮೊತ್ತದ ದೇಣಿಗೆ ನೀಡಿದ್ದಾರೆ” ಎಂದು ಅವರು ಹೇಳಿದ್ದಾರೆ.

ಖಂದ್ವಾನಿ ಅವರ ಎಕ್ಸ್ ಪೋಸ್ಟ್ ಅನ್ನು ಹಾಜಿ ಅಲಿ ದರ್ಗಾದ ಅಧಿಕೃತ ಎಕ್ಸ್ ಖಾತೆಯಲ್ಲೂ ಹಂಚಿಕೊಳ್ಳಲಾಗಿದೆ.

ಮುಂಬೈ ನಗರದ ಹೆಗ್ಗುರುತುಗಳ ಪೈಕಿ ಒಂದಾದ ಹಾಜಿ ಅಲಿ ದರ್ಗಾವನ್ನು ಭಾರತ-ಇಸ್ಲಾಮಿಕ್ ವಾಸ್ತು ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದ್ದು, ಸೈಯದ್ ಪೀರ್ ಹಾಜಿ ಅಲಿ ಶಾ ಬುಖಾರಿ ಅವರ ಗೋರಿ ಇಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News