×
Ad

1996ರ ಮಾದಕ ವಸ್ತು ಇರಿಸಿದ ಪ್ರಕರಣ; ಜೈಲು ಶಿಕ್ಷೆ ರದ್ದುಗೊಳಿಸುವಂತೆ ಕೋರಿ ಸುಪ್ರೀಂ ಮೆಟ್ಟಿಲೇರಿದ ಸಂಜೀವ್ ಭಟ್

Update: 2025-12-03 22:13 IST

ಸಂಜೀವ್ ಭಟ್ | Photo Credit : thehindu.com

ಹೊಸದಿಲ್ಲಿ, ಡಿ. 3: ಮಾದಕ ವಸ್ತು ಇರಿಸಿದ 1996ರ ಪ್ರಕರಣದಲ್ಲಿ ತನಗೆ ನೀಡಲಾದ 20 ವರ್ಷಗಳ ಜೈಲು ಶಿಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದಾರೆ.

1990ರ ಪ್ರತ್ಯೇಕ ಕಸ್ಟಡಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಸಂಜೀವ್ ಭಟ್ ಅವರು ಕಾರಾಗೃಹದಲ್ಲಿದ್ದಾರೆ.

ಸಂಜೀವ್ ಭಟ್ ಅವರು ಸಲ್ಲಿಸಿದ ಅರ್ಜಿ ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಹಾಗೂ ವಿಜಯ್ ಬಿಷ್ಣೋಯಿ ಅವರ ಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂತು. ಆದರೆ, ಸಂಜೀವ್ ಭಟ್ ಅವರ ಪರವಾಗಿ ಹಾಜರಾಗಿದ್ದ ನ್ಯಾಯಾವಾದಿ ಕಪಿಲ್ ಸಿಬಲ್ ಅವರ ಮನವಿಯ ಮೇರೆಗೆ ವಿಚಾರಣೆಯನ್ನು ಪೀಠ ಮುಂದೂಡಿತು.

ರಾಜಸ್ಥಾನ ಮೂಲದ ವಕೀಲ ಸುಮೇರ್ ಸಿಂಗ್ ರಾಜಪುರೋಹಿತ್ ನೀಡಿದ ದೂರಿನ ಆಧಾರದಲ್ಲಿ ದಾಖಲಿಸಲಾದ ಪ್ರಕರಣದಲ್ಲಿ ಸಂಜೀವ್ ಭಟ್ ಅವರನ್ನು 2018ರಲ್ಲಿ ಬಂಧಿಸಲಾಗಿದೆ. ಸಂಜೀವ್ ಭಟ್ ಹಾಗೂ ಇತರರು 1996ರಲ್ಲಿ ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಪಾಲನ್‌ಪುರ ಹೊಟೇಲ್‌ನಲ್ಲಿ ತಾನು ತಂಗಿದ್ದ ಸಂದರ್ಭ 1.5 ಕಿ.ಗ್ರಾಂ. ಅಫೀಮು ಇರಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News