×
Ad

ಕೇರಳ: ಕಣ್ಣೂರು ಜೈಲಿನಿಂದ ತಪ್ಪಿಸಿ ಬಾವಿಯಲ್ಲಿ ಅವಿತಿದ್ದ ಅತ್ಯಾಚಾರ, ಕೊಲೆ ಪ್ರಕರಣದ ಅಪರಾಧಿ ಸೆರೆ

Update: 2025-07-25 15:13 IST

ಗೊವಿಂದಚಾಮಿ (Photo credit: ANI)

ಕಣ್ಣೂರು: 2011ರ ಕೇರಳದ ಸೌಮ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಅಪರಾಧಿ ಗೊವಿಂದಚಾಮಿ ಕಣ್ಣೂರು ಕೇಂದ್ರ ಜೈಲಿನಿಂದ ತಪ್ಪಿಸಿಕೊಂಡ ಕೆಲವೇ ಗಂಟೆಗಳಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಕಣ್ಣೂರು ನಗರ ವ್ಯಾಪ್ತಿಯ ಥಲಾಪ್‌ನಲ್ಲಿರುವ ಪಾಳುಬಿದ್ದ ಕಟ್ಟಡದ ಸಮೀಪ ಆತನನ್ನು ಸೆರೆಹಿಡಿಯಲಾಗಿದೆ. ಆತ ಕಟ್ಟಡದ ಸಮೀಪ ಇದ್ದ ಬಾವಿಯಲ್ಲಿ ಅಡಗಿ ಕುಳಿತಿದ್ದ ಎಂದು ತಿಳಿದು ಬಂದಿದೆ.

2011ರ ಫೆಬ್ರವರಿ 1ರಂದು ಎರ್ನಾಕುಲಂನಿಂದ ಶೋರನೂರಿಗೆ ತೆರಳುತ್ತಿದ್ದ ರೈಲಿನಲ್ಲಿ ಒಂಟಿಯಾಗಿ ಪ್ರಯಾಣಿಸುತ್ತಿದ್ದಾಗ ಮಂಜಕ್ಕಾಡ್ ನಿವಾಸಿ 23ರ ಹರೆಯದ ಸೌಮ್ಯಾ ಅವರನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು. ಪ್ರಕರಣದಲ್ಲಿ ಗೊವಿಂದಚಾಮಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News