×
Ad

ಕಳೆದ 5 ವರ್ಷಗಳಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಮೊಟಕುಗೊಳಿಸಿದ 25,000ಕ್ಕೂ ಅಧಿಕ SC/ST/OBC ವಿದ್ಯಾರ್ಥಿಗಳು: ಸರ್ಕಾರದಿಂದ ಮಾಹಿತಿ

Update: 2023-07-27 16:51 IST

ಸಾಂದರ್ಭಿಕ ಚಿತ್ರ (credit: telegraphindia.com)

ಹೊಸದಿಲ್ಲಿ:ಪರಿಶಿಷ್ಟ ಜಾತಿ, ಪಂಗಡ, ಇತರ ಹಿಂದುಳಿದ ವರ್ಗಗಳು ಮತ್ತು ಇತರ ಅಲ್ಪಸಂಖ್ಯಾತ ಗುಂಪುಗಳಿಂದ ಸೇರಿದಂತೆ 25,593 ಮೀಸಲು ವಿಭಾಗದ ವಿದ್ಯಾರ್ಥಿಗಳು ಕಳೆದ ಐದು ವರ್ಷಗಳಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯಗಳು ಮತ್ತು ಐಐಟಿಗಳಿಂದ ಶಿಕ್ಷಣವನ್ನು ಅರ್ಧದಲ್ಲಿಯೇ ಕೈಬಿಟ್ಟಿದ್ದಾರೆ ಎಂದು ಕೇಂದ್ರ ಶಿಕ್ಷಣ ರಾಜ್ಯ ಸಚಿವ ಸುಭಾಸ್‌ ಸರ್ಕಾರ್‌ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.

2019 ಹಾಗೂ 2023ರ ನಡುವೆ 17,545 ಮೀಸಲು ವಿಭಾಗದ ವಿದ್ಯಾರ್ಥಿಗಳು ಕೇಂದ್ರೀಯ ವಿವಿಗಳಿಂದ ಅರ್ಧದಲ್ಲಿಯೇ ಹೊರಬಿದ್ದಿದ್ದರೆ, ಈ ಅವಧಿಗಳಲ್ಲಿ ಐಐಟಿಗಳಿಂದ 8,139 ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧದಲ್ಲಿಯೇ ತೊರೆದಿದ್ದಾರೆ ಎಂದು ಸದಸ್ಯ ಸುಶೀಲ್‌ ಕುಮಾರ್‌ ಕೇಳಿದ ಪ್ರಶ್ನೆಗೆ ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ.

ಶಿಕ್ಷಣವನ್ನು ಅರ್ಧದಲ್ಲಿಯೇ ತೊರೆದವರಲ್ಲಿ ಸ್ನಾತ್ತಕೋತ್ತರ ಮತ್ತು ಪಿಎಚ್ಡಿ ವಿದ್ಯಾರ್ಥಿಗಳಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ಸ್ನಾತ್ತಕೋತ್ತರ ಮತ್ತು ಪಿಎಚ್ಡಿ ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧದಲ್ಲಿಯೇ ನಿಲ್ಲಿಸಲು ನೀಡಿದ ಕಾರಣ ಸಾರ್ವಜನಿಕ ರಂಗದ ಸಂಸ್ಥೆಗಳಲ್ಲಿ ಪ್ಲೇಸ್‌ಮೆಂಟ್‌ ಮತ್ತು ಉತ್ತಮ ಅವಕಾಶಗಳು ಬೇರೆಡೆ ಇವೆ ಎಂದಿದ್ದಾರೆ.

ತಪ್ಪಾದ ವಿಷಯ ಆರಿಸಲಾಗಿದೆ,ಅಥವಾ ವೈಯಕ್ತಿಕ ಮತ್ತು ವೈದ್ಯಕೀಯ ಕಾರಣಗಳು ಎಂದು ಹೇಳಿ ಪದವಿ ಕೋಸುಗಳನ್ನು ವಿದ್ಯಾರ್ಥಿಗಳು ಅರ್ಧದಲ್ಲಿಯೇ ಕೈಬಿಡಲು ಕಾರಣ ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News