×
Ad

ಮಹಾರಾಷ್ಟ್ರ| ರಸಗೊಬ್ಬರ ತಯಾರಿಕಾ ಘಟಕದಲ್ಲಿ ಸ್ಪೋಟ; ಮೂವರು ಮೃತ್ಯು

Update: 2024-11-22 15:43 IST

ಸಾಂದರ್ಭಿಕ ಚಿತ್ರ

ಮುಂಬೈ: ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿರು ರಸಗೊಬ್ಬರ ತಯಾರಿಕಾ ಘಟಕದಲ್ಲಿ ಅನಿಲ ಸೋರಿಕೆಯಾಗಿದ್ದು, ರಿಯಾಕ್ಟರ್‌ ಸ್ಪೋಟ ನಡೆದು ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.

ಸಾಂಗ್ಲಿ ಜಿಲ್ಲೆಯ ತೆಹಸಿಲ್‌ನ ಶಾಲ್ಗಾಂವ್ ಎಂಐಡಿಸಿ ಪ್ರದೇಶದಲ್ಲಿರುವ ಮ್ಯಾನ್ಮಾರ್ ಕೆಮಿಕಲ್ ಕಂಪನಿಯಲ್ಲಿ ಗುರುವಾರ ಸಂಜೆ ದುರಂತ ಘಟನೆ ಸಂಭವಿಸಿದೆ.

ಸ್ಫೋಟದ ಸಮಯದಲ್ಲಿ ಬಿಡುಗಡೆಯಾದ ವಿಷಕಾರಿ ಹೊಗೆಯ ಪರಿಣಾಮಗಳಿಂದ ಒಂಬತ್ತು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಂಜೆ 6:30ರ ಸುಮಾರಿಗೆ ಈ ಘಟನೆ ನಡೆದಿದ್ದು, ರಸಗೊಬ್ಬರ ಸ್ಥಾವರದಲ್ಲಿನ ರಿಯಾಕ್ಟರ್ ಸ್ಫೋಟಗೊಂಡು ಸುತ್ತಮುತ್ತಲಿನ ಪ್ರದೇಶಕ್ಕೆ ಹಾನಿಕಾರಕ ರಾಸಾಯನಿಕ ಹೊಗೆ ಬಿಡುಗಡೆಯಾಗಿದೆ.

ಗಾಯಾಳುಗಳು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದು, ಸ್ಫೋಟದ ಕಾರಣದ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News