×
Ad

ನಕಲಿ ಆಧಾರ್‌ ಕಾರ್ಡ್‌ನೊಂದಿಗೆ ಸಂಸತ್‌ ಸಂಕೀರ್ಣ ಪ್ರವೇಶಿಸಲು ಯತ್ನಿಸಿದ ಮೂವರ ಬಂಧನ

Update: 2024-06-07 11:29 IST

Photo: PTI

ಹೊಸದಿಲ್ಲಿ: ಜೂನ್‌ 4ರಂದು ನಕಲಿ ಆಧಾರ್‌ ಕಾರ್ಡ್‌ಗಳೊಂದಿಗೆ ಗರಿಷ್ಠ ಭದ್ರತೆಯ ಸಂಸತ್‌ ಸಂಕೀರ್ಣವನ್ನು ಪ್ರವೇಶಿಸಿದ್ದ ಮೂವರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಬಂಧಿತರು ಕಾರ್ಮಿಕರೆಂದು ತಿಳಿದು ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ಕಾಸಿಂ, ಮೋನಿಸ್‌ ಮತ್ತು ಸೋಯೆಬ್‌ ಎಂದು ಗುರುತಿಸಲಾಗಿದೆ. ಅವರ ವಿರುದ್ಧ ಐಪಿಸಿ ಸೆಕ್ಷನ್‌ 465, 419, 120ಬಿ, 471 ಮತ್ತು 468 ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಸಾಮಾನ್ಯ ಎಂಟ್ರಿ ಪಾಸ್‌ ಬಳಸಿಕೊಂಡು ಉತ್ತರ ಪ್ರದೇಶದ ಈ ಮೂವರು ಸಂಸತ್‌ ಸಂಕೀರ್ಣದೊಳಗೆ ಪ್ರವೇಶಿಸಲು ಯತ್ನಿಸುತ್ತಿರುವುದನ್ನು ಅಲ್ಲಿನ ಭದ್ರತೆ ನಿಯೋಜಿಸಲ್ಪಟ್ಟ ಸಿಐಎಸ್‌ಎಫ್‌ ಅಧಿಕಾರಿಗಳು ಗಮನಿಸಿದ್ದರು. ಮೋನಿಸ್‌ ಮತ್ತು ಕಾಸಿಂ ತೋರಿಸಿದ ಆಧಾರ್‌ ಕಾರ್ಡ್‌ಗಳಲ್ಲಿ ಒಂದೇ ರೀತಿಯ ಸಂಖ್ಯೆಗಳಿದ್ದವು.

ಮೂವರೂ ಗುತ್ತಿಗೆದಾರ ಶಾಹ್‌ನವಾಝ್‌ ಆಲಂ ಅಡಿ ಕೆಲಸ ಮಾಡುತ್ತಿದ್ದರು. ಇಬ್ಬರು ಹಾಜರುಪಡಿಸಿದ ಆಧಾರ್‌ ಕಾರ್ಡ್‌ಗಳಲ್ಲಿ ಒಂದು ಅಥವಾ ಎರಡೂ ನಕಲಿಯಾಗಿರಬಹುದೆಂಬ ಶಂಕೆ ಇದೆ.

ಎಂಪಿ ಲೌಂಜ್‌ ನಿರ್ಮಾಣ ಕೆಲಸಕ್ಕಾಗಿ ಅವರನ್ನು ನಿಯೋಜಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News