×
Ad

ಅತ್ಯಾಚಾರ ಆರೋಪ; ಮೂವರು ಪೊಲೀಸರ ವಿರುದ್ದ ಪ್ರಕರಣ ದಾಖಲು

Update: 2023-12-24 21:19 IST

Photo: PTI

ಜೈಪುರ: ರಾಜಸ್ಥಾನದ ಆಲ್ವಾರ್ ಜಿಲ್ಲೆಯಲ್ಲಿ 18 ವರ್ಷದ ಯುವತಿಯನ್ನು ಒಂದು ವರ್ಷಕ್ಕೂ ಅಧಿಕ ಕಾಲ ಅತ್ಯಾಚಾರ ಎಸಗಿದ ಆರೋಪದಲ್ಲಿ ಮೂವರು ಪೊಲೀಸ್ ಕಾನ್ಸ್ಟೇಬಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.

ಮಹಿಳೆ ಮೂವರು ಪೊಲೀಸರ ವಿರುದ್ಧ ಶನಿವಾರ ಸಂಜೆ ತನಗೆ ದೂರು ನೀಡಿದ್ದಾರೆ. ಮೂವರು ಪೊಲೀಸರು ತನ್ನನನ್ನು 1 ವರ್ಷಕ್ಕೂ ಅಧಿಕ ಕಾಲ ಅತ್ಯಾಚಾರಕ್ಕೆ ಒಳಪಡಿಸಿದ್ದಾರೆ. ಈ ವಿಷಯವನ್ನು ಬಹಿರಂಗಪಡಿಸಿದ ತನ್ನ ಸಹೋದರನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗುವುದು ಎಂದು ಆರೋಪಿಗಳು ಬೆದರಿಕೆ ಒಡ್ಡಿದ್ದಾರೆ ಎಂದು ಆಕೆ ದೂರಿನಲ್ಲಿ ಆರೋಪಿಸಿದ್ದಾಳೆ ಎಂದು ಪೊಲೀಸ್ ಅಧೀಕ್ಷಕ ಆನಂದ್ ಶರ್ಮಾ ತಿಳಿಸಿದ್ದಾರೆ.

ಈ ಪೊಲೀಸರನ್ನು ನಿಯೋಜನೆ ಮಾಡಿದ ಸ್ಥಳದಿಂದ ಹಿಂದಕ್ಕೆ ಕರೆಸಲಾಗಿದೆ. ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಹಾಗೂ ಪೊಕ್ಸೊ ಅಡಿಯಲ್ಲಿ ರೈನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಓರ್ವ ಪೊಲೀಸ್ ಕಾನ್ಸ್ಟೇಬಲ್ ನನ್ನು ರೈನಿ ಪೊಲೀಸ್ ಠಾಣೆಗೆ, ಇನ್ನೋರ್ವನನ್ನು ರಾಯಗಢ ಸರ್ಕಲ್ ಅಧಿಕಾರಿಯ ಕಚೇರಿಗೆ ಹಾಗೂ ಮತ್ತೋರ್ವನನ್ನು ಮಾಳಖೇಡ ಪೊಲೀಸ್ ಠಾಣೆಗೆ ನಿಯೋಜಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News