×
Ad

ಗಾಝಾ| ನೆರವು ವಿತರಣಾ ಕೇಂದ್ರದ ಮೇಲೆ ಇಸ್ರೇಲ್‌ನಿಂದ ಗುಂಡಿನ ದಾಳಿ: 30 ಮಂದಿ ಮೃತ್ಯು , ಹಲವರಿಗೆ ಗಾಯ

Update: 2025-06-01 13:33 IST
Photo credit: PTI

ಗಾಝಾ : ದಕ್ಷಿಣ ಗಾಝಾದ ರಫಾದಲ್ಲಿರುವ ಅಮೆರಿಕ ಬೆಂಬಲಿತ ನೆರವು ವಿತರಣಾ ಕೇಂದ್ರದ ಬಳಿ ಇಸ್ರೇಲ್ ಸೇನೆ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 30 ಮಂದಿ ಫೆಲೆಸ್ತೀನ್‌ ನಾಗರಿಕರು ಮೃತಪಟ್ಟಿದ್ದಾರೆ ಮತ್ತು 115ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಬೆಳಗಿನ ಜಾವ ನೆರವು ಕೇಂದ್ರದ ಬಳಿ ಸಾವಿರಾರು ಜನರು ಜಮಾಯಿಸಿದ ವೇಳೆ ಇಸ್ರೇಲ್ ಸೇನೆ ಜನಸಮೂಹದ ಮೇಲೆ ಗುಂಡು ಹಾರಿಸಿದೆ ಎಂದು ವರದಿಯಾಗಿದೆ.

ಈ ಬಗ್ಗೆ ಹಮಾಸ್ ಹೇಳಿಕೆ ನೀಡಿದ್ದು, ರಫಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಸ್ರೇಲ್ ಪಡೆಗಳು ಮಾನವೀಯ ನೆರವು ವಿತರಣಾ ಕೇಂದ್ರಗಳಲ್ಲಿ ಜಮಾಯಿಸಿದ ಹಸಿದ ನಾಗರಿಕರ ಮೇಲೆ ದಾಳಿ ನಡೆಸಿ ಹತ್ಯಾಕಾಂಡ ನಡೆಸುತ್ತಿದೆ. ಇದು ಮಾನವೀಯ ನೆರವು ಕೇಂದ್ರಗಳಲ್ಲ ಸಾಮೂಹಿಕ ಹತ್ಯಾಕಾಂಡದ ಕೇಂದ್ರಗಳು ಎಂದು ಹೇಳಿಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News