×
Ad

ಮಹಾಕುಂಭ ಮೇಳ | 200 ರಿಂದ 300 ಕಿ.ಮೀ. ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ ಯಾತ್ರಾರ್ಥಿಗಳು!

Update: 2025-02-10 17:16 IST

Photo credit: PTI

ಹೊಸದಿಲ್ಲಿ : ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಹಿನ್ನೆಲೆ 200 ರಿಂದ 300 ಕಿ.ಮೀ.ಗಳಷ್ಟು ದೂರ ಟ್ರಾಫಿಕ್ ಜಾಮ್ ಉಂಟಾಗಿದೆ ಎಂದು ವರದಿಯಾಗಿದೆ.

ಮಹಾಕುಂಭ ಮೇಳದಲ್ಲಿ ಭಾಗವಹಿಸಲು ಲಕ್ಷಗಟ್ಟಲೆ ಯಾತ್ರಾರ್ಥಿಗಳು ಆಗಮಿಸುತ್ತಿದ್ದು, ಮಧ್ಯಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ನೂರಾರು ಕಿಲೋಮೀಟರ್‌ ಗಳಷ್ಟು ದೂರದಲ್ಲಿ ಮುಂದಕ್ಕೆ ಪ್ರಯಾಣ ಸಾಧ್ಯವಾಗದೆ ಭಕ್ತರು ದಿನಗಟ್ಟಲೆ ಟ್ರಾಫಿಕ್‌ ಜಾಮ್‌ ನಲ್ಲಿ ಸಿಲುಕಿಕೊಂಡಿದ್ದಾರೆ. ಪ್ರಯಾಗ್ ರಾಜ್ ನಿಂದ ಮಧ್ಯಪ್ರದೇಶದ ರೇವಾ, ಜಬಲ್ ಪುರ, ಸಿಯೋನಿ, ಕಟ್ನಿವರೆಗೆ ಭಾರೀ ಸಂಚಾರ ದಟ್ಟಣೆ ಉಂಟಾಗಿದೆ.

ಬಸಂತ್ ಪಂಚಮಿಯ ಶಾಹಿ ಸ್ನಾನದ ನಂತರ ಜನಸ್ತೋಮ ಕಡಿಮೆಯಾಗಬಹುದು ಎಂದು ಹೇಳಲಾಗಿತ್ತು. ಆದರೆ ಫೆ.12ರ ಶಾಹಿ ಸ್ನಾನಕ್ಕಾಗಿ ಲಕ್ಷಾಂತರ ಮಂದಿ ಪ್ರಯಾಗ್ ರಾಜ್ ಗೆ ಆಗಮಿಸಿದ್ದಾರೆ. ಜನಸಂದಣಿಯನ್ನು ತಡೆಯಲು ಪ್ರಯಾಗ್ ರಾಜ್ ಕಡೆಗೆ ಹೋಗುವ ಹಲವಾರು ವಾಹನಗಳನ್ನು ವಿವಿಧ ಪ್ರದೇಶಗಳಲ್ಲಿ ತಡೆ ಹಿಡಿಯಲಾಗಿದೆ.

ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಗಡಿಯಲ್ಲಿ ಕಟ್ನಿಯಲ್ಲಿ ಸುಮಾರು 250 ಕಿಲೋಮೀಟರ್ ಗಳಷ್ಟು ದೂರದಲ್ಲಿ ಟ್ರಾಫಿಕ್ ಜಾಮ್ ಆಗಿರುವ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳಿಕೊಂಡಿದ್ದಾರೆ. ಮಹಾಕುಂಭ ಮೇಳಕ್ಕೆ ಹೆಚ್ಚಿನ ಭಕ್ತರ ಆಗಮನದಿಂದ ಸಾಕಷ್ಟು ಟ್ರಾಫಿಕ್ ಜಾಮ್‌ ಇತ್ತು ಎಂದು ರೇವಾ ವಲಯದ ಪೊಲೀಸ್ ಮಹಾನಿರೀಕ್ಷಕ ಸಾಕೇತ್ ಪ್ರಕಾಶ್ ಪಾಂಡೆ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News