ಬಿಹಾರ | ಬಟಾಣಿ ಕಳ್ಳತನದ ಆರೋಪದಲ್ಲಿ ನಾಲ್ವರು ಮಕ್ಕಳನ್ನು ಕಟ್ಟಿ ಹಾಕಿ ಥಳಿತ
Update: 2025-07-27 12:23 IST
Photo | NDTV
ಪಾಟ್ನಾ: ಬಿಹಾರದ ಗ್ರಾಮವೊಂದರಲ್ಲಿ 25 ಕೆಜಿ ಬಟಾಣಿ ಕಳ್ಳತನದ ಆರೋಪದಲ್ಲಿ ನಾಲ್ವರು ಮಕ್ಕಳನ್ನು ಹಗ್ಗಗಳಿಂದ ಕೈಗಳನ್ನು ಕಟ್ಟಿ ಹಾಕಿ ಥಳಿಸಿ ಮೆರವಣಿಗೆ ಮಾಡಿರುವ ಘಟನೆ ನಡೆದಿದೆ.
ಮುಂಗೇರ್‌ನ ಜೋವಾಬಹಿಯಾರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಈ ಕುರಿತ 20 ಸೆಕೆಂಡುಗಳ ವೀಡಿಯೊದಲ್ಲಿ ಅಪ್ರಾಪ್ತ ವಯಸ್ಕರ ಕೈಗಳನ್ನು ಕಟ್ಟಿಹಾಕಿ ಥಳಿಸಿ ಮೆರವಣಿಗೆ ನಡೆಸಿರುವುದು ಕಂಡು ಬಂದಿದೆ. ವೀಡಿಯೊ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾದ ಆಕ್ರೋಶ ವ್ಯಕ್ತವಾಗಿದೆ.
ಘಟನೆಯ ವಿಡಿಯೋ ಲಭ್ಯವಾಗಿದೆ. ಈ ಕುರಿತು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಸೈಯದ್ ಇಮ್ರಾನ್ ಮಸೂದ್ ತಿಳಿಸಿದ್ದಾರೆ.