×
Ad

ಅಜಿತ್‌ ಪವಾರ್‌ ಬಣದ ಎನ್‌ಸಿಪಿಗೆ ಆಘಾತ: ಪಕ್ಷದ ನಾಲ್ಕು ಪ್ರಮುಖ ನಾಯಕರು ರಾಜೀನಾಮೆ

Update: 2024-07-17 10:35 IST

ಅಜಿತ್‌ ಪವಾರ್‌ (PTI)

ಮುಂಬೈ: ಅಜಿತ್‌ ಪವಾರ್‌ ಬಣದ ಎನ್‌ಸಿಪಿಗೆ ದೊಡ್ಡ ಹಿನ್ನಡೆಯುಂಟು ಮಾಡಿದ ಬೆಳವಣಿಗೆಯಲ್ಲಿ ಪಕ್ಷದ ನಾಲ್ಕು ಪ್ರಮುಖ ನಾಯಕರು ರಾಜೀನಾಮೆ ನೀಡಿದ್ದಾರೆ. ಈ ನಾಲ್ಕು ಮಂದಿಯೂ ಈ ವಾರ ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿಗೆ ಸೇರುವ ಸಾಧ್ಯತೆಯಿದೆ.

ಎನ್‌ಸಿಪಿ ಅಜಿತ್‌ ಪವಾರ್‌ ಬಣದ ಪಿಂಪ್ರಿ-ಚಿಂಚ್ವಾಡ್‌ ಘಟಕದ ಮುಖ್ಯಸ್ಥ ಅಜಿತ್‌ ಗವಹಾನಿ, ಪಕ್ಷದ ಪಿಂಪ್ರಿ ಚಿಂಚ್ವಾಡ್‌ ವಿದ್ಯಾರ್ಥಿ ಘಟಕದ ಅಧ್ಯಕ್ಷ ಯಶ್‌ ಸಾನೆ ಹಾಗೂ ಮಾಜಿ ಕಾರ್ಪೊರೇಟರ್‌ಗಳಾದ ರಾಹುಲ್‌ ಬೊಸಾಲೆ ಮತ್ತು ಪಂಕಲ್‌ ಭಲೇಕರ್‌ ರಾಜೀನಾಮೆ ನೀಡಿದ ಮುಖಂಡರಾಗಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ನಿರಾಶಾದಾಯಕ ನಿರ್ವಹಣೆಯ ಬಳಿಕ ಅಜಿತ್‌ ಪವಾರ್‌ ಬಣದ ಎನ್‌ಸಿಪಿಯಲ್ಲಿ ಅಸಮಾಧಾನ ಹೊಗೆಯಾಡಿತ್ತಲ್ಲದೆ ಹಲವು ನಾಯಕರು ಶರದ್‌ ಪವಾರ್‌ ಬಣಕ್ಕೆ ವಾಪಸಾಗಬಹುದೆಂಬ ಊಹಾಪೋಹಗಳಿದ್ದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News