×
Ad

ಪುಣೆಯಲ್ಲಿ ನೀರಿನ ಟ್ಯಾಂಕ್ ಕುಸಿದು ಐವರು ಕಾರ್ಮಿಕರು ಮೃತ್ಯು

Update: 2024-10-24 18:33 IST
PC : PTI 

ಪುಣೆ: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಕಾರ್ಮಿಕರ ಶಿಬಿರದಲ್ಲಿ ಹೊಸದಾಗಿ ನಿರ್ಮಿಸಿದ ನೀರಿನ ಟ್ಯಾಂಕ್ ಕುಸಿದು ಐವರು ಕಾರ್ಮಿಕರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ ಪಿಂಪ್ರಿ ಚಿಂಚ್ವಾಡ್ ಭೋಸಾರಿ ಪ್ರದೇಶದಲ್ಲಿ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರ ಬಳಕೆಗೆಂದು ಹೊಸ ನೀರಿನ ಟ್ಯಾಂಕ್ ನ್ನು ನಿರ್ಮಿಸಲಾಗಿತ್ತು.

ಕಾರ್ಮಿಕರು ನೀರಿನ ಟ್ಯಾಂಕ್ ಬಳಿ ಸ್ನಾನ ಮಾಡುತ್ತಿದ್ದಾಗ ಟ್ಯಾಂಕ್ ಏಕಾಏಕಿ ಕುಸಿದ ಪರಿಣಾಮ ನೀರಿನ ಟ್ಯಾಂಕ್ ಕೆಳಗೆ ಇದ್ದ ಕಾರ್ಮಿಕರು ಅವಶೇಷಗಳಡಿ ಸಿಲುಕಿದ್ದಾರೆ. ಅವರಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ವಸಂತ ಪರದೇಶಿ ಹೇಳಿದ್ದಾರೆ.

ಅವಘಢದ ವೇಳೆ ಕನಿಷ್ಠ 12ರಿಂದ 15 ಕಾರ್ಮಿಕರು ಸ್ನಾನ ಮಾಡುತ್ತಿದ್ದರು. ಘಟನೆಯಲ್ಲಿ ಇನ್ನು ಐವರಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮತ್ತೋರ್ವ ಅಧಿಕಾರಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News