5ನೇ ಸಮನ್ಸ್‌ಗೂ ಈ.ಡಿ. ಮುಂದೆ ಹಾಜರಾಗದ ಕೇಜ್ರಿವಾಲ್
Update: 2024-02-02 22:35 IST
ಅರವಿಂದ ಕೇಜ್ರಿವಾಲ್ | Photo: PTI
ಹೊಸದಿಲ್ಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ನೀಡಿದ 5ನೇ ಸಮನ್ಸ್‌ಗೆ ಕೂಡ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಜರಾಗಿಲ್ಲ.
ಈ ಹಿಂದಿನ 4 ಸಮನ್ಸ್‌ಗಳಿಗೆ ಹಾಜರಾಗದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಅರವಿಂದ ಕೇಜ್ರಿವಾಲ್ ಅವರಿಗೆ ಬುಧವಾರ 5ನೇ ಸಮನ್ಸ್ ನೀಡಿತ್ತು ಹಾಗೂ ಫೆ.2ರಂದು ತನ್ನ ಮುಂದೆ ಹಾಜರಾಗುವಂತೆ ಸೂಚಿಸಿತ್ತು.
ಸಮನ್ಸ್ ಅನ್ನು ಕಾನೂನು ಬಾಹಿರ ಎಂದು ಹೇಳಿರುವ ಆಮ್ ಆದ್ಮಿ ಪಕ್ಷ, ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಲು ಜಾರಿ ನಿರ್ದೇಶನಾಲಯ ಮತ್ತೆ ಮತ್ತೆ ಸಮನ್ಸ್ ಕಳುಹಿಸುತ್ತಿದೆ ಎಂದು ಹೇಳಿದೆ.