×
Ad

ರಾಜಸ್ಥಾನದಲ್ಲಿ 7 ಸಂಸದರು ವಿಧಾನಸಭಾ ಚುನಾವಣಾ ಕಣಕ್ಕೆ

Update: 2023-10-09 17:46 IST

PHOTO : NDTV

ಹೊಸದಿಲ್ಲಿ: ರಾಜಸ್ಥಾನದ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಕ್ಷದಿಂದ ಸೋಮವಾರ 41 ಅಭ್ಯರ್ಥಿಗಳ ಘೋಷಣೆಯಾಗಿದ್ದು, ಪಟ್ಟಿಯಲ್ಲಿ 7 ಸಂಸದರಿದ್ದಾರೆ. 200 ಸದಸ್ಯ ಬಲದ ವಿಧಾನಸಭೆಗೆ ನ.23ರಂದು ಮತದಾನ ನಡೆಯಲಿದ್ದು ಬಿಜೆಪಿ ಆಡಳಿತ ಪಕ್ಷ ಕಾಂಗ್ರೆಸ್ ಸೋಲಿಸಲು ಚುನಾವಣಾ ತಂತ್ರ ಹಣೆಯುತ್ತಿದೆ.

ಸಂಸದರಾದ ರಾಜ್ಯವರ್ಧನ್ ಸಿಂಗ್ ರಾಥೋಡ್ ಝೋತ್ವಾರಾದಿಂದ, ತಿಜಾರಾದಿಂದ ಬಾಬಾ ಬಾಲಕನಾಥ್, ಸಪೋತ್ರದಿಂದ ಹಂಸರಾಜ್ ಮೀನಾ, ಮಾಧೋಪುರದಿಂದ ಕಿರೋಡಿ ಲಾಲ್ ಮೀನಾ ಸವಾಯಿ, ವಿದ್ಯಾಧರ್ ನಗರದಿಂದ ದಿಯಾ ಕುಮಾರಿ, ಭಾಗೀರಥ ಚೌಧರಿ ಕಿಶನಘರ್ ನಿಂದ, ದೇವ್ ಜಿ ಪಟೇಲ್ ಸಂಚೋರೆಯಿಂದ ಸ್ಪರ್ಧಿಸಲಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News