ಅಮೆರಿಕದಲ್ಲಿ ಸಿಖ್ ವ್ಯಕ್ತಿ ಮೇಲೆ ಹಲ್ಲೆ : ಸ್ಥಿತಿ ಗಂಭೀರ
ಸಾಂದರ್ಭಿಕ ಚಿತ್ರ|indiatoday
ಲಾಸ್ ಏಂಜಲೀಸ್ : ಅಮೆರಿಕದ ಲಾಸ್ ಏಂಜಲೀಸ್‌ನ ಗುರುದ್ವಾರ ಬಳಿ 70ರ ಹರೆಯದ ಸಿಖ್ ವ್ಯಕ್ತಿಗೆ ಅಪರಿಚಿತನೋರ್ವ ಗಾಲ್ಫ್ ಸ್ಟಿಕ್‌ನಿಂದ ಥಳಿಸಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ʼನಾರ್ತ್ ಹಾಲಿವುಡ್ʼನಲ್ಲಿ ಹರ್ಪಾಲ್ ಸಿಂಗ್ ಮೇಲೆ ಗಾಲ್ಫ್ ಸ್ಟಿಕ್‌ನಿಂದ ಹಲ್ಲೆ ನಡೆಸಲಾಗಿದೆ. ಅವರ ಮುಖಕ್ಕೆ ಗಂಭೀರವಾದ ಗಾಯಗಳಾಗಿದ್ದು, ಮೆದುಳಿನಲ್ಲಿ ರಕ್ತಸ್ರಾವವಾಗಿದೆ ಎಂದು ವರದಿಯಾಗಿದೆ.
“ಹರ್ಪಾಲ್ ಸಿಂಗ್ ಸಂಪೂರ್ಣವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಅವರಿಗೆ ಮೂರು ಶಸ್ತ್ರಚಿಕಿತ್ಸೆಗಳು ನಡೆದಿದೆ” ಎಂದು ಅವರ ಸಹೋದರ ಗುರುದಯಾಲ್ ಸಿಂಗ್ ರಾಂಧವಾ ಹೇಳಿದ್ದಾರೆ.
ಲಾಸ್ ಏಂಜಲೀಸ್‌ನಲ್ಲಿರುವ ಸಿಖ್ ಸಮುದಾಯವು ದಾಳಿಯನ್ನು ಖಂಡಿಸಿದೆ ಮತ್ತು ಆ ಪ್ರದೇಶದಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸುವಂತೆ ಕೋರಿದೆ. ವೈರಲ್ ವೀಡಿಯೊದಲ್ಲಿ ಸಿಂಗ್ ರಕ್ತದ ಮಡುವಿನಲ್ಲಿ ಕುಳಿತುಕೊಂಡಿರುವುದು ಕಂಡು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಈವೆರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ವರದಿಯಾಗಿದೆ.