12,000 ಕೋ. ರೂ ಮೌಲ್ಯದ 2,000 ಮುಖಬೆಲೆಯ ನೋಟುಗಳು ಇನ್ನೂ ಚಲಾವಣೆಯಲ್ಲಿವೆ: ಆರ್‌ಬಿಐ
Photo : PTI
ಮುಂಬೈ: 2,000 ಮುಖಬೆಲೆಯ 3.43 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳು ಮರಳಿ ಬಂದಿವೆ ಎಂದು ಗವರ್ನರ್ ಶಕ್ತಿಕಾಂತ್ ದಾಸ್ ಶುಕ್ರವಾರ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅ. 8 ರಿಂದ ಆರ್‌ಬಿಐ 19 ಕಚೇರಿಗಳಲ್ಲಿ ನೋಟುಗಳನ್ನು ಹಿಂದಿರುಗಿಸಬಹುದು.
ಈಗಾಗಲೇ ಚಲಾವಣೆಯಲ್ಲಿದ್ದ 87% ನೋಟುಗಳನ್ನು ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ. ಉಳಿದವುಗಳನ್ನು ಕೌಂಟರ್‌ನಲ್ಲಿ ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
12,000 ಕೋ. ರೂ. ಗೂ ಹೆಚ್ಚು ನೋಟುಗಳು ಇನ್ನೂ ಚಲಾವಣೆಯಲ್ಲಿವೆ ಎಂದು ಎಂದು ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದರು. ವಿನಿಮಯ ಮಾಡಿಕೊಳುವ ಸಮಯದ ನಂತರವೂ ನೋಟುಗಳನ್ನು ಹಿಂತಿರುಗಿಸಬಹುದು ಎಂದು ಪುನರುಚ್ಚರಿಸಿದರು.
2016ರಲ್ಲಿ ಜಾರಿಗೆ ತಂದಿದ್ದ 2,000 ಮುಖಬೆಲೆಯ ನೋಟುಗಳನ್ನು ವಾಪಸ್ ಪಡೆಯುವ ನಿರ್ಧಾರವನ್ನು ಆರ್ ಬಿ ಐ ಮೇ 19 ರಂದು ಪ್ರಕಟಿಸಿತು.
ಆರಂಭದಲ್ಲಿ ನೋಟುಗಳನ್ನು ಠೇವಣಿ ಇಡಲು ಅಥವಾ ವಿನಿಮಯ ಮಾಡಿಕೊಳ್ಳಲು ಸೆಪ್ಟೆಂಬರ್ 30ರವರೆಗೆ ಕಾಲಾವಕಾಶ ನೀಡಿದ್ದ ಆರ್‌ಬಿಐ, ಕೊನೆಯ ದಿನಾಂಕದಂದು ಅಕ್ಟೋಬರ್ 7ರವರೆಗೆ ಒಂದು ವಾರ ವಿಸ್ತರಿಸಿತು. ಅಕ್ಟೋಬರ್ 8 ರಿಂದ ರಿಸರ್ವ್ ಬ್ಯಾಂಕ್‌ನ ಕಚೇರಿಗಳಲ್ಲಿ ಠೇವಣಿ ಮಾಡಬಹುದು ಅಥವಾ ವಿನಿಮಯ ಮಾಡಿಕೊಳ್ಳಬಹುದು ಎಂದು ಆರ್ ಬಿ ಐ ಗವರ್ನರ್ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ಹಳೆಯ ನೋಟುಗಳ ಬಗ್ಗೆ ಕಾಳಜಿ ವಹಿಸುವ ಅಗತ್ಯದಿಂದ ಕೂಡಿದ ನೋಟುಗಳನ್ನು ಹಿಂಪಡೆಯುವ ಮೂಲ ಉದ್ದೇಶವು ಈಡೇರಿದೆ.
ಯಾರಾದರೂ ಆರ್‌ಬಿಐ ಕಚೇರಿಗಳಿಗೆ ಪ್ರಯಾಣಿಸಲು ಸಾಧ್ಯವಾಗದಿದ್ದಲ್ಲಿ ಅಂಚೆ ಇಲಾಖೆಯ ಸೇವೆಗಳನ್ನು ಪಡೆಯಬಹುದು ಎಂದು ಶಕ್ತಿಕಾಂತ್ ದಾಸ್ ಹೇಳಿದರು.