×
Ad

ಮಹಾರಾಷ್ಟ್ರದ ಮತದಾರರ ಪಟ್ಟಿಯಲ್ಲಿ ಚುನಾವಣಾ ಆಯೋಗ 96 ಲಕ್ಷ ನಕಲಿ ಮತದಾರರನ್ನು ಸೇರಿಸಿದೆ : ರಾಜ್ ಠಾಕ್ರೆ ಆರೋಪ

Update: 2025-10-19 23:18 IST

MNS chief Raj Thackeray (PTI)

ಮುಂಬೈ, ಅ. 19: ಮಹಾರಾಷ್ಟ್ರದ ಮತದಾರರ ಪಟ್ಟಿಯಲ್ಲಿ ಚುನಾವಣಾ ಆಯೋಗ 96 ಲಕ್ಷ ನಕಲಿ ಮತದಾರರನ್ನು ಸೇರಿಸಿದೆ ಎಂದು ಎಂಎನ್‌ಎಸ್ ಸ್ಥಾಪಕಾಧ್ಯಕ್ಷ ರಾಜ್ ಠಾಕ್ರೆ ರವಿವಾರ ಆರೋಪಿಸಿದ್ದಾರೆ.

ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಟೀಕಿಸಿದರು. ಮತದಾರರ ಪಟ್ಟಿಯನ್ನು ಶುದ್ಧೀಕರಿಸುವಂತೆ ಹಾಗೂ ಈ ಶುದ್ಧೀಕರಣದಿಂದ ಎಲ್ಲಾ ಪಕ್ಷಗಳು ತೃಪ್ತರಾಗುವವರೆಗೆ ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸದಂತೆ ರಾಜ್ ಅವರು ಚುನಾವಣಾ ಆಯೋಗವನ್ನು ಆಗ್ರಹಿಸಿದರು.

ಮುಂಬೈಯ ಗೋರೇಗಾಂವ್‌ನಲ್ಲಿರುವ ನೆಸ್ಕೊ ಸಂಕೀರ್ಣದಲ್ಲಿ ಎಂಎನ್‌ಎಸ್‌ನ ಬೂತ್ ಮಟ್ಟದ ಏಜೆಂಟರ ಸಭೆಯಲ್ಲಿ ಅವರು ಮಾತನಾಡಿದರು.

‘‘ಮತದಾರರ ಪಟ್ಟಿಯನ್ನು ತಿರುಚುವ ಮೂಲಕ ಚುನಾವಣೆ ನಡೆಸಿದರೆ, ಅದು ಮತದಾರರಿಗೆ ಮಾಡುವ ಅತಿ ದೊಡ್ಡ ಅವಮಾನ. ನೀವು ಮತ ಹಾಕಿ ಅಥವಾ ಹಾಕದಿರಿ, ಮ್ಯಾಚ್ ಫಿಕ್ಸ್ ಆಗಿರುತ್ತದೆ. ಫಲಿತಾಂಶ ನಿರ್ಧಾರವಾಗಿರುತ್ತದೆ. ನಾವು ಇದನ್ನು ಚುನಾವಣಾ ಆಯೋಗದ ಗಮನಕ್ಕೆ ತಂದಾಗ, ಆಡಳಿತಾರೂಢ ಪಕ್ಷ ಯಾಕೆ ಪ್ರತಿಕ್ರಿಯಿಸುತ್ತದೆ?’’ ಎಂದು ಅವರು ಪ್ರಶ್ನಿಸಿದ್ದಾರೆ.

‘‘ಪ್ರಾದೇಶಿಕ ಪಕ್ಷಗಳನ್ನು ಮುಗಿಸುವ ಪ್ರಯತ್ನ ನಡೆಯುತ್ತಿದೆ. ಮುಂಬರುವ ಚುನಾವಣೆಗೆ ಮಹಾರಾಷ್ಟ್ರದ ಮತದಾರರ ಪಟ್ಟಿಯಲ್ಲಿ 96 ಲಕ್ಷ ನಕಲಿ ಮತದಾರರನ್ನು ಸೇರಿಸಲಾಗಿದೆ ಎಂದು ನನಗೆ ತಿಳಿದು ಬಂದಿದೆೆ. ಅವರು ವಿಧಾನ ಸಭೆ ಚುನಾವಣೆಗೆ ಮುನ್ನವೇ ಇದನ್ನು ಮಾಡಿದ್ದಾರೆ’’ ಎಂದು ರಾಜ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News