×
Ad

12ರ ಹರೆಯದ ಬಾಲಕಿಯ ಅತ್ಯಾಚಾರ ಪ್ರಕರಣ; ರಿಕ್ಷಾ ಚಾಲಕ ಸಹಿತ ಮೂವರು ಪೊಲೀಸ್ ವಶಕ್ಕೆ

Update: 2023-09-28 11:27 IST

ಸಾಂದರ್ಭಿಕ ಚಿತ್ರ

ಮಧ್ಯಪ್ರದೇಶ: ಉಜ್ಜಯಿನಿ ನಗರದ ಬೀದಿಯಲ್ಲಿ 12 ವರ್ಷದ ಅತ್ಯಾಚಾರ ಸಂತ್ರಸ್ತ ಬಾಲಕಿ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಕ್ಷಾ ಚಾಲಕ ಸೇರಿ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅರೆಬೆತ್ತಲಾಗಿ, ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದ 12ರ ಹರೆಯದ ಅತ್ಯಾಚಾರ ಸಂತ್ರಸ್ತ ಬಾಲಕಿ ನೆರವು ಕೋರಿ ಸಮೀಪದ ಮನೆಗಳಿಗೆ ತೆರಳಿದ್ದಳು. ಆದರೆ ಜನರು ಆಕೆಗೆ ನೆರವಾಗಲು ನಿರಾಕರಿಸಿದ್ದರು. ಓರ್ವ ವ್ಯಕ್ತಿಯಂತೂ ಆಕೆಯನ್ನು ಅಲ್ಲಿಂದ ಓಡಿಸಿದ್ದ. ಇವೆಲ್ಲ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು.

ಘಟನೆ ಸಂಬಂಧ ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ. ತನಿಖೆ ವೇಳೆ ಸಂತ್ರಸ್ತ ಬಾಲಕಿ ಜೀವನ್ ಖೇರಿಯಲ್ಲಿ ರಿಕ್ಷಾ ಹತ್ತಿರುವುದು ಸಿಸಿಟಿವಿಯಲ್ಲಿ ಕಂಡು ಬಂದಿದ್ದು, ಪೊಲೀಸರು ರಿಕ್ಷಾ ಚಾಲಕ ಸಹಿತ ಮೂವರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News