×
Ad

ಐಎಎಫ್ ಸಂಕೀರ್ಣದಲ್ಲೇ ಗುಂಡು ಹಾರಿಸಿಕೊಂಡು ಯುವ ಅಗ್ನಿವೀರ ಆತ್ಮಹತ್ಯೆ

Update: 2024-07-06 09:25 IST

ಶ್ರೀಕಾಂತ್ ಕುಮಾರ್ ಚೌಧರಿ PC:x.com/aashuu 

ಆಗ್ರಾ: ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯ 22 ವರ್ಷ ವಯಸ್ಸಿನ ಅಗ್ನಿವೀರ ಶ್ರೀಕಾಂತ್ ಕುಮಾರ್ ಚೌಧರಿ ತಮ್ಮ ಐಎನ್ಎಸ್ಎಸ್ ಸರ್ವೀಸ್ ರೈಫಲ್ ನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ಆಗ್ರಾದ ತಾಜ್ ನಗರ್ ಪ್ರದೇಶದಲ್ಲಿರುವ ಭಾರತೀಯ ವಾಯುಪಡೆ ಸಂಕೀರ್ಣದ ತಾಂತ್ರಿಕ ವಲಯದಲ್ಲೇ ಚೌಧರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಆತ್ಮಹತ್ಯೆ ನಿರ್ಧಾರಕ್ಕೆ ಯಾವುದೇ ಕಾರಣ ತಿಳಿದುಬಂದಿಲ್ಲ ಅಥವಾ ಯಾವುದೇ ಆತ್ಮಹತ್ಯೆ ಟಿಪ್ಪಣಿ ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಚೌಧರಿ ಸಾವಿಗೆ ಕಾರಣವಾದ ಅಂಶಗಳ ಬಗ್ಗೆ ಐಎಎಫ್ ತನಿಖೆ ಆರಂಬಿಸಿದೆ. ಚೌಧರಿಯವರ ಅಂತ್ಯಸಂಸ್ಕಾರ ಸಾಂಪ್ರದಾಯಿಕ ಗೌರವಗಳೊಂದಿಗೆ ಹುಟ್ಟುರು ನಾರಾಯಣಪುರದಲ್ಲಿ ನಡೆಯಿತು.‌

ಮೃತ ಅಗ್ನಿವೀರನ ಕುಟುಂಬ ಸದಸ್ಯರು ಈ ಬಗ್ಗೆ ಯಾವುದೇ ದೂರು ನೀಡಿಲ್ಲ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಶಾಗಂಜ್ ಠಾಣಾಧಿಕಾರಿ ಅಮಿತ್ ಕುಮಾರ್ ಮಾನ್ ಹೇಳಿದ್ದಾರೆ.

2022ರ ಡಿಸೆಂಬರ್ ನಲ್ಲಿ ಚೌಧರಿ ಭಾರತೀಯ ವಾಯುಪಡೆ ಸೇರಿದ್ದರು. ಆರು ತಿಂಗಳ ಹಿಂದ ಆಗ್ರಾದಲ್ಲಿ ನಿಯೋಜಿತರಾಗಿದ್ದರು. ಜೂನ್ 3ರಂದು ಮನೆಗೆ ತೆರಳಿದ್ದ ಅವರು 10 ದಿನ ಬಳಿಕ ಕರ್ತವ್ಯಕ್ಕೆ ಹಾಜರಾಗಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News