×
Ad

ಕಾಂಗ್ರೆಸ್ ಪಕ್ಷವನ್ನು ದುರ್ಬಲಗೊಳಿಸಲೆಂದೇ ಆಪ್ ಹರ್ಯಾಣ ಪ್ರವೇಶಿಸಿತ್ತು: ಸ್ವಾತಿ ಮಲಿವಾಲ್ ಆರೋಪ

Update: 2024-10-08 14:04 IST

ಸ್ವಾತಿ ಮಲಿವಾಲ್ (Photo: PTI)

ಹೊಸದಿಲ್ಲಿ: ಹರ್ಯಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯುಂಟು ಮಾಡುವ ಮೂಲಕ ಆಪ್ ಇಂಡಿಯಾ ಮೈತ್ರಿಕೂಟಕ್ಕೆ ವಿಶ್ವಾಸ ದ್ರೋಹವೆಸಗಿದೆ ಎಂದು ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಆರೋಪಿಸಿದ್ದಾರೆ.

ಹರ್ಯಾಣದಲ್ಲಿ ಕಾಂಗ್ರೆಸ್ ಪಕ್ಷವನ್ನು ದುರ್ಬಲಗೊಳಿಸಲೆಂದೇ ಆಪ್ ಚುನಾವಣಾ ಅಖಾಡ ಪ್ರವೇಶಿಸಿತ್ತು. ಇದು ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ಎಸಗಿರುವ ದ್ರೋಹ ಎಂದು ಅವರು ಆರೋಪಿಸಿದ್ದಾರೆ.

ವಿನೇಶ್ ಫೋಗಟ್ ರಂಥ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸಿದ್ದ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಾನಿ ಮಾಡಲೆಂದೇ ಆಪ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತೇ ಹೊರತು ಬಿಜೆಪಿಯನ್ನು ಪರಾಭವಗೊಳಿಸುವತ್ತ ಗಮನ ಹರಿಸಿರಲಿಲ್ಲ ಎಂದೂ ಅವರು ಆಪಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News