×
Ad

ಹರ್ಯಾಣದ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲಿ ಆಪ್ ಏಕಾಂಗಿಯಾಗಿ ಸ್ಪರ್ಧಿಸಲಿದೆ: ಅರವಿಂದ ಕೇಜ್ರಿವಾಲ್

Update: 2024-01-28 21:59 IST

ಅರವಿಂದ ಕೇಜ್ರಿವಾಲ್ | Photo: PTI  

ಹೊಸದಿಲ್ಲಿ : ಹರ್ಯಾಣದ ಎಲ್ಲಾ 90 ವಿಧಾನ ಸಭಾ ಕ್ಷೇತ್ರದಲ್ಲಿ ತನ್ನ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ರವಿವಾರ ತಿಳಿಸಿದ್ದಾರೆ.

ಆದರೆ, ಲೋಕಸಭೆ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟದ ಭಾಗವಾಗಿ ಸ್ಪರ್ಧಿಸಲಿದೆ ಎಂದು ಅವರು ಹೇಳಿದ್ದಾರೆ.

‘‘ಇಂದು ಜನರಿಗೆ ಒಂದು ಪಕ್ಷದಲ್ಲಿ ಮಾತ್ರ ನಂಬಿಕೆ ಇದೆ. ಅದು ಆಮ್ ಆದ್ಮಿ ಪಕ್ಷ. ಒಂದೆಡೆ ಜನರು ಪಂಜಾಬ್ ಅನ್ನು ನೋಡುತ್ತಾರೆ. ಇನ್ನೊಂದೆಡೆ ದಿಲ್ಲಿಯ ನಮ್ಮ ಸರಕಾರವನ್ನು ನೋಡುತ್ತಾರೆ. ಇಂದು ಹರ್ಯಾಣ ಅತಿ ದೊಡ್ಡ ಬದಲಾವಣೆ ಬಯಸುತ್ತಿದೆ. ದಿಲ್ಲಿ ಹಾಗೂ ಪಂಜಾಬ್ ನಲ್ಲಿ ಜನರು ಈ ಮೊದಲೇ ಅತಿ ದೊಡ್ಡ ಬದಲಾವಣೆ ಮಾಡಿದರು. ಇದರಿಂದ ಅವರು ಅಲ್ಲಿ ಸಂತೋಷವಾಗಿದ್ದಾರೆ’’ ಎಂದು ಕೇಜ್ರಿವಾಲ್ ಜಿಂದ್ ನಲ್ಲಿ ನಡೆದ ತನ್ನ ಪಕ್ಷದ ‘ಬದ್ಲಾವ್ ಜನಸಭಾ’ದಲ್ಲಿ ಮಾತನಾಡುತ್ತಾ ಹೇಳಿದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News