×
Ad

ಪೂಜಾ ಖೇಡ್ಕರ್ ಸಂಬಂಧಿಕರು ಭಾಗಿಯಾಗಿದ್ದ ಅಪಘಾತ-ಅಪಹರಣ ಪ್ರಕರಣ: ಪೋಷಕರಿಗೆ ಪೊಲೀಸರ ಹುಡುಕಾಟ ತೀವ್ರ

Update: 2025-09-16 22:15 IST

PC : PTI

ಮುಂಬೈ: ನವಿ ಮುಂಬೈನಿಂದ ಟ್ರಕ್ ಚಾಲಕನ ಸಹಾಯಕನನ್ನು ಅಪಹರಿಸಿದ ತಮ್ಮ ಅಂಗರಕ್ಷಕನೊಂದಿಗೆ ಆರೋಪಕ್ಕೆ ಗುರಿಯಾಗಿರುವ ವಜಾಗೊಂಡಿರುವ ಮಾಜಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ತಂದೆ ದಿಲೀಪ್ ಖೇಡ್ಕರ್ ಗಾಗಿ ಪೊಲೀಸರು ತಮ್ಮ ಹುಡುಕಾಟ ತೀವ್ರಗೊಳಿಸಿದ್ದಾರೆ.

ಇದರೊಂದಿಗೆ, ಪುಣೆ ಪೊಲೀಸರು ಪೂಜಾ ಖೇಡ್ಕರ್ ಅವರ ತಾಯಿ ಮನೋರಮಾ ಖೇಡ್ಕರ್ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದು, ಅವರಿಗಾಗಿಯೂ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಶನಿವಾರ ದಿಲೀಪ್ ಖೇಡ್ಕರ್ ಅವರು ತಮ್ಮ ಅಂಗರಕ್ಷಕ ಪ್ರಫುಲ್ ಸಾಲುಂಖೆಯೊಂಗೆ ಪ್ರಯಾಣಿಸುತ್ತಿದ್ದ ಕಾರು ಸಿಮೆಂಟ್ ಮಿಕ್ಸರ್ ಟ್ರಕ್ ಒಂದರೊಂದಿಗೆ ಡಿಕ್ಕಿಯಾಗಿತ್ತು. ಈ ಟ್ರಕ್ ಅನ್ನು ಚಂದ್ರಕುಮಾರ್ ಚವಾಣ್ ಎಂಬುವವರು ಚಲಾಯಿಸುತ್ತಿದ್ದರು ಹಾಗೂ ಅವರ ಪಕ್ಕದ ಆಸನದಲ್ಲಿ ಸಹಾಯಕ ಪ್ರಹ್ಲಾದ್ ಕುಮಾರ್ ಕುಳಿತಿದ್ದರು. ಈ ಅಪಘಾತದ ಕುರಿತು ಪೊಲೀಸರಿಗೆ ಮಾಹಿತಿ ನೀಡುವ ಹಾಗೂ ಪೊಲೀಸ್ ಠಾಣೆಗೆ ಕರೆದೊಯ್ಯುವ ಸೋಗಿನಲ್ಲಿ ಅವರಿಬ್ಬರೂ ಪ್ರಹ್ಲಾದ್ ಕುಮಾರ್ ನನ್ನು ಅಪಹರಿಸಿತ್ತು.

ರವಿವಾರ ಪುಣೆಯ ಚತುರ್ ಶ್ರಿಂ ಗಿ ಪ್ರದೇಶದಲ್ಲಿರುವ ಖೇಡ್ಕರ್ ಕುಟುಂಬದ ನಿವಾಸದಿಂದ ನವಿ ಮುಂಬೈ ಪೊಲೀಸರು ಅಪಹೃತ ಪ್ರಹ್ಲಾದ್ ಕುಮಾರ್ ನನ್ನು ರಕ್ಷಿಸಿದ್ದರು. ಈ ವೇಳೆ, ಪೊಲೀಸರು ಮನೆಯೊಳಗೆ ಪ್ರವೇಶಿಸದಂತೆ ತಡೆ ಹಿಡಿದಿದ್ದ ಮನೋರಮಾ ಖೇಡ್ಕರ್, ಅವರೊಂದಿಗೆ ಮಾತಿನ ಚಕಮಕಿ ನಡೆಸಿದ್ದರು. ಇದಲ್ಲದೆ, ಪೊಲೀಸ್ ಸಿಬ್ಬಂದಿಗಳನ್ನು ಹೆದರಿಸಲು ಆಕೆ ನಾಯಿಗಳನ್ನೂ ಛೂ ಬಿಟ್ಟಿದ್ದರು ಎಂದು ಆರೋಪಿಸಲಾಗಿದೆ.

ಬಳಿಕ, ಕಾರಿನಲ್ಲಿದ್ದವರು ದಿಲೀಪ್ ಖೇಡ್ಕರ್ ಹಾಗೂ ಅವರ ಅಂಗರಕ್ಷಕ ಎಂದು ಪ್ರಹ್ಲಾದ್ ಕುಮಾರ್ ಗುರುತಿಸಿದ್ದ.

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪುಣೆ ಪೊಲೀಸರು ಮನೋರಮಾ ಖೇಡ್ಕರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ನೋಟಿಸ್ ಜಾರಿಗೊಳಿಸಿದ್ದರೆ, ದಿಲೀಪ್ ಕುಮಾರ್ ಹಾಗೂ ಅವರ ಅಂಗರಕ್ಷಕನ ವಿರುದ್ಧ ನವಿ ಮುಂಬೈ ಪೊಲೀಸರು ಪ್ರಕರಣವೊಂದನ್ನು ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News