×
Ad

ವಿದ್ಯಾರ್ಥಿ ನಿಲಯಗಳಲ್ಲಿ ಆತ್ಮಹತ್ಯೆ ತಡೆಯಲು ಸ್ಪ್ರಿಂಗ್ ಫ್ಯಾನ್ ಬಳಿಕ ಈಗ ಬಾಲ್ಕನಿಗಳಲ್ಲಿ ಬಲೆಗಳ ಅಳವಡಿಕೆ

Update: 2023-08-27 17:32 IST

Photo: PTI 

ಕೋಟಾ (ರಾಜಸ್ಥಾನ): ವಿದ್ಯಾರ್ಥಿಗಳು ಯಾವುದೇ ಅತಿರೇಕದ ಕ್ರಮಗಳಿಗೆ ಮುಂದಾಗುವುದನ್ನು ತಡೆಯಲು ಕೋಟಾ ತರಬೇತಿ ತಾಣದಲ್ಲಿನ ವಿದ್ಯಾರ್ಥಿ ನಿಲಯಗಳಲ್ಲಿ ಸ್ಪ್ರಿಂಗ್ ಫ್ಯಾನ್ ಅಳವಡಿಸುವ ಉಪಕ್ರಮದ ನಂತರ, ಇದೀಗ ವಿದ್ಯಾರ್ಥಿ ನಿಲಯಗಳ ಬಾಲ್ಕನಿ ಹಾಗೂ ಲಾಬಿಗಳಲ್ಲಿ ಆತ್ಮಹತ್ಯೆ ತಡೆ ಬಲೆಗಳನ್ನು ಅಳವಡಿಸಲಾಗಿದೆ ಎಂದು PTI ವರದಿ ಮಾಡಿದೆ.

ಆತ್ಮಹತ್ಯೆ ತಡೆಯಲು ವಿದ್ಯಾರ್ಥಿ ನಿಲಯಗಳ ಆವರಣದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಬಹು ಮುಖ್ಯವಾಗಿದೆ ಎಂದು ವಿದ್ಯಾರ್ಥಿ ನಿಲಯಗಳ ಮಾಲಕರು ಅಭಿಪ್ರಾಯ ಪಟ್ಟಿದ್ದಾರೆ.

ಇಂಜಿನಿಯರಿಂಗ್ ಪದವಿಗೆ ದಾಖಲಾಗಲು ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಹಾಗೂ ವೈದ್ಯಕೀಯ ಕಾಲೇಜುಗಳಿಗೆ ದಾಖಲಾಗಲು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್)ಯಂಥ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯಲು ವಾರ್ಷಿಕ ಎರಡು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೋಟಾಗೆ ಹರಿದು ಬರುತ್ತಿದ್ದಾರೆ.

ಈ ವರ್ಷದಲ್ಲಿ ಇಲ್ಲಿಯವರೆಗೆ ಕೋಟಾದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದ 20 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದು, ಯಾವುದೇ ವರ್ಷದಲ್ಲಿ ದಾಖಲಾಗಿರುವ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ಇವಾಗಿವೆ. ಕಳೆದ ವರ್ಷ ಈ ಸಂಖ್ಯೆ 15ರಷ್ಟಿತ್ತು ಎಂದು ಪ್ರಾಧಿಕಾರಗಳು ತಿಳಿಸಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಾಲಕಿಯರ ವಿದ್ಯಾರ್ಥಿ ನಿಲಯವಾದ ವಿಶಾಲಾಕ್ಷಿ ರೆಸಿಡೆನ್ಸಿ ಮಾಲಕ ವಿನೋದ್ ಗೌತಮ್, “ಒಂದು ವೇಳೆ ವಿದ್ಯಾರ್ಥಿಗಳೇನಾದರೂ ಮೇಲಿನ ಅಂತಸ್ತುಗಳಿಂದ ಜಿಗಿದರೆ, ಅಂಥ ವಿದ್ಯಾರ್ಥಿಗಳನ್ನು ತಡೆಯಲು ನಾವು ಎಲ್ಲ ಲಾಬಿ ಹಾಗೂ ಬಾಲ್ಕನಿಗಳಲ್ಲಿ ದೊಡ್ದ ಬಲೆಗಳನ್ನು ಅಳವಡಿಸಿದ್ದೇವೆ. ಈ ಬಲೆಗಳು 150 ಕೆಜಿವರೆಗಿನ ತೂಕವನ್ನು ತಾಳಿಕೊಳ್ಳಬಲ್ಲವಾಗಿದ್ದು, ವಿದ್ಯಾರ್ಥಿಗಳು ಗಾಯಗೊಳ್ಳದಂತೆ ಖಾತ್ರಿಯನ್ನೂ ನೀಡುತ್ತವೆ” ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News