×
Ad

ಏಜೆಂಟ್‌ಗಳ ವಂಚನೆಯಿಂದ ಭಾರತೀಯರು ರಷ್ಯಾ ಯುದ್ಧದಲ್ಲಿ ಪಾಲ್ಗೊಳ್ಳುವಂತಾಗಿದೆ: ಅಸಾದುದ್ದೀನ್ ಉವೈಸಿ ಆರೋಪ

Update: 2024-02-21 18:58 IST

ಅಸಾದುದ್ದೀನ್ ಉವೈಸಿ | Photo: PTI 

ಹೈದರಾಬಾದ್‌: ರಷ್ಯಾದಲ್ಲಿ ಭದ್ರತಾ ಸಿಬ್ಬಂದಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ್ದ ಏಜೆಂಟರು ವಂಚಿಸಿರುವುದರಿಂದ ಮೂವರು ತೆಲಂಗಾಣ ವ್ಯಕ್ತಿಗಳು ಸೇರಿದಂತೆ ಹತ್ತಾರು ಭಾರತೀಯರು ಉಕ್ರೇನ್ ವಿರುದ್ಧದ ರಷ್ಯಾ ಯುದ್ಧದಲ್ಲಿ ಪಾಲ್ಗೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ ಎಂದು ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಉವೈಸಿ ಆರೋಪಿಸಿದರು.

ಏಜೆಂಟರಿಂದ ವಂಚನೆಗೊಳಗಾಗಿ ರಷ್ಯಾ ಯುದ್ಧಕ್ಕೆ ತೆರಳಿರುವ ಮೂವರು ಭಾರತೀಯರನ್ನು ಮರಳಿ ತವರಿಗೆ ಕರೆ ತರಲು ಮಧ್ಯಪ್ರವೇಶಿಸಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್‌ಗೆ ಅವರು ಮನವಿ ಮಾಡಿದರು.

ರಷ್ಯಾಗೆ ಕಳಿಸಿಕೊಟ್ಟ ಭಾರತೀಯರಿಗೆ ಅಲ್ಲಿ ಪ್ರಾಥಮಿಕ ಶಸ್ತ್ರಾಸ್ತ್ರ ತರಬೇತಿ ನೀಡಲಾಗಿದ್ದು, ಅವರನ್ನು ಬಲವಂತವಾಗಿ ಯುದ್ಧ ಭೂಮಿಗೆ ರವಾನಿಸಲಾಗಿದೆ. ಅವರನ್ನು ಸೇನೆಯ ಸ್ವಯಂಸೇವಕರನ್ನಾಗಿ ಉಪಾಯದಿಂದ ಪರಿವರ್ತಿಸಲಾಗಿದ್ದು, ಮರಿಯಪೋಲ್, ಖಾರ್ಕಿವ್ ಹಾಗೂ ಡೊನೆಟ್ಸ್ಕ್‌ಗೆ ಯುದ್ಧ ಮಾಡಲು ಕಳಿಸಿಕೊಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News