ಉತ್ತರಪ್ರದೇಶ: ಫತೇಹಾಬಾದ್‌ಗೆ ಸಿಂದೂರಪುರಂ, ಬಾದಶಾಹಿ ಬಾಗ್‌ಗೆ ಬ್ರಹ್ಮಪುರಂ ಎಂದು ಮರುನಾಮಕರಣ
Update: 2025-06-25 16:58 IST
ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ (Photo: PTI)
ಆಗ್ರಾ: ಫತೇಹಾಬಾದ್ ಮತ್ತು ಬಾದಶಾಹಿ ಬಾಗ್ ಹೆಸರನ್ನು ಕ್ರಮವಾಗಿ ಸಿಂದೂರಪುರಂ ಮತ್ತು ಬ್ರಹ್ಮಪುರಂ ಎಂದು ಉತ್ತರಪ್ರದೇಶದ ಆಗ್ರಾ ಜಿಲ್ಲಾ ಪಂಚಾಯತ್ ಮರುನಾಮಕರಣ ಮಾಡಿದೆ.
ಫತೇಹಾಬಾದ್ ಮತ್ತು ಬಾದಶಾಹಿ ಬಾಗ್ ಮರು ನಾಮಕರಣ ಮಾಡುವ ಬಗ್ಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ. ಮಂಜು ಭಡೋರಿಯಾ ಪ್ರಸ್ತಾವನೆಯನ್ನು ಮಂಡಿಸಿದರು. ಸೋಮವಾರ ನಡೆದ ಮಂಡಳಿಯ ಸಭೆಯಲ್ಲಿ ಪ್ರಸ್ತಾವನೆಯನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ಈಗ ಅದನ್ನು ಅನುಮೋದನೆಗಾಗಿ ರಾಜ್ಯ ಸರಕಾರಕ್ಕೆ ಕಳುಹಿಸಲಾಗಿದೆ.
ಈ ಹಿಂದೆ ಪಟ್ಟಣವನ್ನು ಸಮುಘರ್ ಎಂದು ಕರೆಯಲಾಗುತ್ತಿತ್ತು ನಂತರ ಅದನ್ನು ಫತೇಹಾಬಾದ್ ಎಂದು ಬದಲಾಯಿಸಲಾಯಿತು. ಇದನ್ನು ಸಿಂದೂರಪುರಂ ಎಂದು ಮರುನಾಮಕರಣ ಮಾಡಬೇಕು ಮತ್ತು ಬಾದಶಾಹಿ ಬಾಗ್‌ಗೆ ಬ್ರಹ್ಮಪುರಂ ಎಂದು ಮರುನಾಮಕರಣ ಮಾಡಬೇಕೆಂದು ಪ್ರಸ್ತಾವನೆಯಲ್ಲಿ ಹೇಳಲಾಗಿತ್ತು.