×
Ad

ದಿಲ್ಲಿ ಬಳಿಕ ಹೆಚ್ಚಿನ ಹಕ್ಕಿ ಬಡಿತಗಳು ಸಂಭವಿಸುವ ಸ್ಥಳ ಅಹ್ಮದಾಬಾದ್!

Update: 2025-06-13 21:02 IST

PC : PTI 

ಹೊಸದಿಲ್ಲಿ: ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಹಕ್ಕಿ ಬಡಿತ ಘಟನೆಗಳ ಕುರಿತು ಡಾ.ಶಂತನು ಸೇನ್ ಅವರು ಎತ್ತಿದ್ದ ಪ್ರಶ್ನೆಗೆ ಉತ್ತರಿಸಿದ್ದ ಆಗಿನ ಸಹಾಯಕ ನಾಗರಿಕ ವಾಯುಯಾನ ಸಚಿವ ಜನರಲ್(ನಿವೃತ್ತ) ವಿ.ಕೆ.ಸಿಂಗ್ ಅವರು ಮಾಹಿತಿಗಳನ್ನು ಒದಗಿಸಿದ್ದರು. ಗುರುವಾರ ಅಹ್ಮದಾಬಾದ್‌ ನಲ್ಲಿ ಏರ್ ಇಂಡಿಯಾ ವಿಮಾನವು ಪತನಗೊಂಡ ಬಳಿಕ ಈ ಮಾಹಿತಿಗಳು ಮತ್ತೆ ಮುನ್ನೆಲೆಗೆ ಬಂದಿವೆ.

ಮಾಹಿತಿಯು 2018 ಮತ್ತು ಅಕ್ಟೋಬರ್ 2023ರ ನಡುವಿನ ಅವಧಿಗೆ ಸಂಬಂಧಿಸಿದ್ದು,ಈ ಅವಧಿಯಲ್ಲಿ ಹಕ್ಕಿ ಬಡಿತದಿಂದ ಯಾವುದೇ ವಿಮಾನ ಅಪಘಾತ ಸಂಭವಿಸಿಲ್ಲ,ಆದರೆ 2021ರಲ್ಲಿ ವರದಿಯಾಗಿದ್ದ ಘಟನೆಯೊಂದರಲ್ಲಿ ವಿಮಾನವೊಂದು ಹಕ್ಕಿ ಬಡಿತದಿಂದಾಗಿ ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು ಎಂದು ಸಿಂಗ್ ತಿಳಿಸಿದ್ದರು.

ಸಿಂಗ್ ತನ್ನ ಉತ್ತರದಲ್ಲಿ ಹಕ್ಕಿ ಬಡಿತ ಘಟನೆಗಳ ಪಟ್ಟಿಯನ್ನೂ ಒದಗಿಸಿದ್ದರು. ಈ ಅವಧಿಯಲ್ಲಿ ಹೊಸದಿಲ್ಲಿ ವರದಿಯಾಗಿದ್ದ 710 ಹಕ್ಕಿ ಬಡಿತ ಘಟನೆಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ನಂತರದ ಸ್ಥಾನಗಳಲ್ಲಿ ಅಹ್ಮದಾಬಾದ್‌ ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ(319), ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ(217), ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ(187) ಮತ್ತು ಹೈದರಾಬಾದ್‌ ನ ರಾಜೀವ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ(186)ನಂತರದ ಸ್ಥಾನಗಳಲ್ಲಿದ್ದವು.

ಪ್ರಸ್ತುತ ಗುರುವಾರ ಅಹ್ಮದಾಬಾದ್‌ ನಲ್ಲಿ ಏರ್‌ಇಂಡಿಯಾ ಪತನಗೊಳ್ಳಲು ಹಕ್ಕಿ ಬಡಿತ ಕಾರಣವಾಗಿತ್ತು ಎನ್ನುವುದಕ್ಕೆ ಯಾವುದೇ ಸೂಚನೆಯಿಲ್ಲ ಎಂದು ಸುದ್ದಿಸಂಸ್ಥೆಯು ಸ್ಪಷ್ಟಪಡಿಸಿದೆ.

ಸಿಂಗ್ ರಾಜ್ಯಸಭೆಯಲ್ಲಿ ನೀಡಿದ್ದ ಉತ್ತರದಲ್ಲಿ ಹಕ್ಕಿ ಬಡಿತ ಘಟನೆಗಳನ್ನು ತಗ್ಗಿಸಲು ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯವು ತೆಗೆದುಕೊಂಡಿದ್ದ ವಿವಿಧ ಕ್ರಮಗಳನ್ನೂ ವಿವರಿಸಿದ್ದರು.

ಆತಂಕಕಾರಿಯಾಗಿ 2022 ಮತ್ತು 2023ರ ನಡುವಿನ ಅವಧಿಯಲ್ಲಿ ಅಹ್ಮದಾಬಾದ್‌ ನಲ್ಲಿ ಹಕ್ಕಿ ಬಡಿತಗಳ ಘಟನೆಗಳು 39ರಿಂದ 81ಕ್ಕೆ (ಶೇ.107 ಹೆಚ್ಚಳ) ಏರಿಕೆಯಾಗಿದ್ದವು. ಅಗ್ರ ಐದು ವಿಮಾನ ನಿಲ್ದಾಣಗಳ ಪೈಕಿ ಕೊಚ್ಚಿ ಮಾತ್ರ ಈ ಅವಧಿಯಲ್ಲಿ ಹಕ್ಕಿ ಬಡಿತ ಘಟನೆಗಳಲ್ಲಿ ಹೆಚ್ಚಳಕ್ಕೆ(ಶೇ.57.14)ಕ್ಕೆ ಸಾಕ್ಷಿಯಾಗಿದ್ದ ಇನ್ನೊಂದು ಸ್ಥಳವಾಗಿತ್ತು. ಇತರ ಮೂರು ವಿಮಾನ ನಿಲ್ದಾಣಗಳಲ್ಲಿ ಹಕ್ಕಿ ಬಡಿತ ಘಟನೆಗಳು ಇಳಿಕೆಯಾಗಿದ್ದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News