×
Ad

19 ಮಾರ್ಗಗಳಲ್ಲಿ ಏರ್ ಇಂಡಿಯಾದ ಸಣ್ಣಗಾತ್ರದ ವಿಮಾನಗಳ ಯಾನಗಳಲ್ಲಿ ತಾತ್ಕಾಲಿಕ ಕಡಿತ

Update: 2025-06-22 22:58 IST

PC : @ArenaJet

ಹೊಸದಿಲ್ಲಿ: ಏರ್ ಇಂಡಿಯಾ ತಾತ್ಕಾಲಿಕವಾಗಿ 19 ಮಾರ್ಗಗಳಲ್ಲಿ ತನ್ನ ಸಣ್ಣ ಗಾತ್ರದ ವಿಮಾನಗಳ 118 ಸಾಪ್ತಾಹಿಕ ಯಾನಗಳನ್ನು ಕಡಿಮೆಗೊಳಿಸುವುದಾಗಿ ಮತ್ತು ಮೂರು ಮಾರ್ಗಗಳಲ್ಲಿ ಕಾರ್ಯಾಚರಣೆಗಳನ್ನು ನಿಲ್ಲಿಸುವುದಾಗಿ ರವಿವಾರ ಪ್ರಕಟಿಸಿದೆ.

ಏರ್ ಇಂಡಿಯಾ ತನ್ನ ದೊಡ್ಡಗಾತ್ರದ ವಿಮಾನಗಳ ಅಂತರರಾಷ್ಟ್ರೀಯ ಯಾನಗಳನ್ನು ಶೇ.15ರಷ್ಟು ಕಡಿತಗೊಳಿಸುವುದಾಗಿ ಈ ಮೊದಲು ಪ್ರಕಟಿಸಿತ್ತು.

ತನ್ನ ಸಣ್ಣಗಾತ್ರದ ವಿಮಾನಗಳ ಒಟ್ಟೂ ಯಾನಗಳಲ್ಲಿ ಶೇ.5ಕ್ಕೂ ಕಡಿಮೆ ತಾತ್ಕಾಲಿಕ ಕಡಿತವನ್ನು ಮಾಡಲು ಮತ್ತು ಮೂರು ಮಾರ್ಗಗಳಲ್ಲಿ ತನ್ನ ಕಾರ್ಯಾಚರಣೆಗಳನ್ನು ಅಮಾನತುಗೊಳಿಸಲು ನಿರ್ಧರಿಸಿದ್ದು,ಇದು ಕನಿಷ್ಠ ಜು.15ರವರೆಗೆ ಜಾರಿಯಲ್ಲಿರಲಿದೆ ಎಂದು ವಿಧ್ಯುಕ್ತ ಹೇಳಿಕೆಯಲ್ಲಿ ಏರ್ ಇಂಡಿಯಾ ತಿಳಿಸಿದೆ.

ಬೆಂಗಳೂರು-ಸಿಂಗಾಪುರ, ಪುಣೆ-ಸಿಂಗಾಪುರ ಮತ್ತು ಮಂಬೈ-ಬಾಗ್ಡೋಗ್ರಾ ಮಾರ್ಗಗಳಲ್ಲಿ ಏಳು ಸಾಪ್ತಾಹಿಕ ಯಾನಗಳು ಜು.15ರವರೆಗೆ ಸ್ಥಗಿತಗೊಳ್ಳಲಿವೆ.

ಹೆಚ್ಚುವರಿಯಾಗಿ ದಿಲ್ಲಿ-ಬೆಂಗಳೂರು ಮತ್ತು ದಿಲ್ಲಿ-ಮುಂಬೈ ಸೇರಿದಂತೆ ಹಲವು ಪ್ರಮುಖ ದೇಶಿ ಮಾರ್ಗಗಳಲ್ಲಿಯೂ ಯಾನಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗುವುದು ಎಂದು ಏರ್ ಇಂಡಿಯಾ ತಿಳಿಸಿದೆ.

ಸಂಸ್ಥೆಯ ಕಾರ್ಯಾಚರಣೆ ಸ್ಥಿರತೆಯನ್ನು ಹೆಚ್ಚಿಸಲು ಮತ್ತು ಪ್ರಯಾಣಿಕರಿಗೆ ಕೊನೇ ಕ್ಷಣದ ಅನಾನುಕೂಲತೆಯನ್ನು ಕನಿಷ್ಠಗೊಳಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಏರ್ ಇಂಡಿಯಾ ಸ್ಪಷ್ಟಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News