×
Ad

ಏರ್ ಇಂಡಿಯಾ ಪೂರೈಸಿದ್ದ ಆಹಾರದಲ್ಲಿ ಜಿರಳೆ ಪತ್ತೆ : ವಿಷಾದಿಸಿದ ವಿಮಾನ ಯಾನ ಸಂಸ್ಥೆ

Update: 2024-09-28 20:32 IST

PC : PTI 

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಿಂದ ನ್ಯೂಯಾರ್ಕ್ ಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರಿಗೆ ಪೂರೈಸಿದ ಆಹಾರದಲ್ಲಿ ಜಿರಳೆ ಪತ್ತೆಯಾಗಿದ್ದು, ಈ ಕುರಿತು ವಿಮಾನ ಯಾನ ಸಂಸ್ಥೆಯು ವಿಷಾದಿಸಿದೆ ಹಾಗೂ ಆಹಾರ ಸರಬರಾಜು ಸಂಸ್ಥೆಯೊಂದಿಗೆ ಈ ಕುರಿತು ಚರ್ಚಿಸಲಾಗುವುದು ಎಂದು ಭರವಸೆ ನೀಡಿದೆ.

“ಸೆಪ್ಟೆಂಬರ್ 17ರಂದು ದಿಲ್ಲಿಯಿಂದ ನ್ಯೂಯಾರ್ಕ್ ಗೆ ಕಾರ್ಯಾಚರಣೆ ನಡೆಸುತ್ತಿದ್ದ ವಿಮಾನ ಸಂಖ್ಯೆ AI 101ರಲ್ಲಿ ಪ್ರಯಾಣಿಕರೊಬ್ಬರಿಗೆ ಪೂರೈಸಲಾಗಿದ್ದ ಆಮ್ಲೆಟ್ ನಲ್ಲಿ ಜಿರಳೆ ಪತ್ತೆಯಾಗಿದೆ ಎಂಬುದು ಸಾಮಾಜಿಕ ಮಾಧ್ಯಮ ಪೋಸ್ಟ್ ಒಂದರಿಂದ ನಮಗೆ ತಿಳಿದು ಬಂದಿದೆ ಹಾಗೂ ನಾವು ಈ ಘಟನೆಗೆ ವಿಷಾದಿಸುತ್ತೇವೆ” ಎಂದು ಏರ್ ಇಂಡಿಯಾ ವಕ್ತಾರರು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ ಪ್ರಯಾಣಿಕರೋರ್ವರು, ನನಗೆ ಪೂರೈಸಲಾಗಿದ್ದ ಆಮ್ಲೆಟ್ ನಲ್ಲಿ ಜಿರಳೆ ಪತ್ತೆಯಾಗಿದೆ ಎಂದು ಆರೋಪಿಸಿದ್ದರು. ಅಲ್ಲದೆ, ಆ ಆಹಾರ ಪೊಟ್ಟಣದ ಕಿರು ಅವಧಿ ವಿಡಿಯೊವನ್ನೂ ಅಪ್ಲೋಡ್ ಮಾಡಿದ್ದರು.

“ನನ್ನ 2 ವರ್ಷದ ಮಗುವು ಅರ್ಧಕ್ಕಿಂತ ಹೆಚ್ಚು ಆಮ್ಲೆಟ್ ಅನ್ನು ತಿಂದು ಮುಗಿಸಿದ್ದಾಗ, ಜಿರಳೆ ಪತ್ತೆಯಾಯಿತು. ಇದರಿಂದಾಗಿ ನಾವು ಆಹಾರ ನಂಜಿಗೆ ಒಳಗಾಗಬೇಕಾಯಿತು” ಎಂದೂ ಅವರು ದೂರಿದ್ದರು.

ಸದರಿ ಪ್ರಯಾಣಿಕರು ತಮ್ಮ ಪೋಸ್ಟ್ ನೊಂದಿಗೆ ನಾಗರಿಕ ವಿಮಾನ ಯಾನ ಮಹಾ ನಿರ್ದೇಶಕರು ಹಾಗೂ ನಾಗರಿಕ ವಿಮಾನ ಯಾನ ಸಚಿವ ಕೆ. ರಾಮ್ ಮೋಹನ್ ನಾಯ್ಡು ಅವರನ್ನೂ ಟ್ಯಾಗ್ ಮಾಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News