×
Ad

ಅಖಿಲೇಶ್ ಯಾದವ್ ನಾಮಪತ್ರ ಸಲ್ಲಿಕೆ

Update: 2024-04-25 22:08 IST

ಅಖಿಲೇಶ್‌ ಯಾದವ್‌ | PC : ANI 

ಕನೌಜ್ (ಉತ್ತರ ಪ್ರದೇಶ): ಸಮಾಜವಾದಿ ಪಕ್ಷದ ಅಧ್ಯಕ್ಷ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಅವರು ಗುರುವಾರ ಕನೌಜ್ ಲೋಕಸಭಾ ಕ್ಷೇತ್ರದಿಂದ ತನ್ನ ನಾಮಪತ್ರವನ್ನು ಸಲ್ಲಿಸಿದರು. ರಾಮಗೋಪಾಲ್ ಯಾದವ್‌ ಸೇರಿದಂತೆ ಪಕ್ಷದ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

2000ರಲ್ಲಿ ಮೊದಲ ಬಾರಿಗೆ ಕನೌಜ್ನಿಂದ ಆಯ್ಕೆಯಾಗಿದ್ದ ಅಖಿಲೇಶ್‌ ಬಳಿಕ 2004 ಮತ್ತು 2009ರಲ್ಲಿ ಪುನರಾಯ್ಕೆಗೊಂಡಿದ್ದರು.

ಸಮಾಜವಾದಿ ಪಕ್ಷವು ಸೋಮವಾರ ಅಖಿಲೇಶ್‌ರ ಸೋದರಪುತ್ರ ತೇಜಪ್ರತಾಪ್ ಯಾದವ್‌ ಅವರನ್ನು ಕನೌಜ್ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿತ್ತು, ಆದರೆ ಬುಧವಾರ ತನ್ನ ನಿರ್ಧಾರವನ್ನು ಬದಲಿಸಿತ್ತು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News