×
Ad

ಮೋದಿ ವಿರುದ್ಧದ ನಿಲುವು ತೆಗೆದುಕೊಂಡವರನ್ನೆಲ್ಲ ಜೈಲಿಗೆ ಹಾಕಲಾಗುತ್ತಿದೆ: ಶರದ್ ಪವಾರ್

Update: 2024-03-24 14:46 IST

 ಶರದ್ ಪವಾರ್ | Photo: X \ @PawarSpeaks

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿ ಮಾರ್ಗವನ್ನು ಅನುಸರಿಸುತ್ತಿದ್ದು, ತಮ್ಮ ವಿರುದ್ಧ ಇರುವವರನ್ನೆಲ್ಲ ಜೈಲಿಗೆ ಹಾಕುತ್ತಿದ್ದಾರೆ ಎಂದು ಟೀಕಿಸಿರುವ ಎನ್‌ಸಿಪಿ (ಎಸ್ಪಿ) ವರಿಷ್ಠ ಶರದ್ ಪವಾರ್, ಪ್ರಧಾನಿ ತಮ್ಮದೇ ಆದ ವೈಯಕ್ತಿಕ ಸಿದ್ಧಾಂತವನ್ನು ಅನುಸರಿಸುತ್ತಿದ್ದು, ಅದು ದೇಶದ ಹಿತಾಸಕ್ತಿಯಿಂದ ಕೂಡಿಲ್ಲ ಎಂದು ವಾಗ್ದಾಳಿ ನಡೆಸಿದರು.

“ನರೇಂದ್ರ ಮೋದಿ ಬಾರಾಮತಿಗೆ ಆಗಮಿಸಿದ್ದಾಗ, ನನ್ನ ಕೈ ಹಿಡಿದುಕೊಂಡು ರಾಜಕೀಯ ಪ್ರಾರಂಭಿಸಿದ್ದೇನೆ ಎಂದು ಹೇಳಿಕೊಂಡಿದ್ದರು. ಆದರೆ, ಅವರ ರಾಜಕೀಯಕ್ಕೂ, ನನ್ನ ಸಿದ್ಧಾಂತಕ್ಕೂ ಯಾವುದೇ ಸಂಬಂಧವಿಲ್ಲ. ಅವರು ನನ್ನ ಕೈ ಹಿಡಿದುಕೊಂಡಿದ್ದಿದ್ದರೆ, ಅವರು ಈ ರೀತಿ ಕೆಲಸ ಮಾಡಲು ಅವಕಾಶ ನೀಡುತ್ತಿರಲಿಲ್ಲ” ಎಂದು ರವಿವಾರ ಮಧ್ಯಾಹ್ನ ತಮ್ಮ ಪುತ್ರಿ ಹಾಗೂ ಮಹಾ ವಿಕಾಸ್ ಅಘಾಡಿಯ ಬಾರಾಮತಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸುಪ್ರಿಯಾ ಸುಳೆ ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಹೇಳಿದರು.

ವಿರೋಧ ಪಕ್ಷಗಳ ವಿರುದ್ಧದ ಜಾರಿ ನಿರ್ದೇಶನಾಲಯದ ತನಿಖೆಯನ್ನು ಉಲ್ಲೇಖಿಸಿದ ಶರದ್ ಪವಾರ್, ಇಂದು ಅಧಿಕಾರದ ದುರ್ಬಳಕೆಯು ಮೋದಿ ಸರಕಾರ ಅನುಸರಿಸುತ್ತಿರುವ ಸರ್ವಾಧಿಕಾರದ ಆರ್ಭಟವಾಗಿದೆ ಎಂದರು.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ನೀತಿಗಳು ದೇಶದ ಹಿತಾಸಕ್ತಿಗೆ ಪೂರಕವಾಗಿಲ್ಲ ಎಂದೂ ಅವರು ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News