×
Ad

“ಬಡವರ ಮತದಾನದ ಹಕ್ಕನ್ನು ಕಸಿದುಕೊಳ್ಳುತ್ತದೆ”: ಬಿಹಾರ ಎಸ್ಐಆರ್ ಬಗ್ಗೆ ನೊಬೆಲ್ ಪುರಸ್ಕೃತ ಅಮರ್ತ್ಯ ಸೇನ್‌ ಕಳವಳ

Update: 2025-08-23 13:57 IST

ಅಮರ್ತ್ಯ ಸೇನ್ (Photo: PTI)

ಕೋಲ್ಕತ್ತಾ: ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಈ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ನಿರ್ವಹಿಸದಿದ್ದರೆ ಹೆಚ್ಚಿನ ಸಂಖ್ಯೆಯ ಬಡ ಮತ್ತು ಅಂಚಿನಲ್ಲಿರುವ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದು ಎಚ್ಚರಿಸಿದ್ದಾರೆ.

ಆಡಳಿತಾತ್ಮಕ ಪ್ರಕ್ರಿಯೆಗಳು ಮತ್ತು ಅವುಗಳ ಅವಧಿ-ಅವಧಿಯ ಪರಿಷ್ಕರಣೆಗಳು ಅಗತ್ಯವಾಗಿದೆ ಎಂಬುದನ್ನು ಒಪ್ಪಿಕೊಂಡರೂ, ಅದರಿಂದ ನಾಗರಿಕರ ಮೂಲಭೂತ ಹಕ್ಕುಗಳಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು ಎಂದು ಹೇಳಿದ ಸೇನ್, ನಾಗರಿಕರಿಂದ ಕಟ್ಟು ನಿಟ್ಟಿನ ದಾಖಲೆಗಳನ್ನು ಕೇಳುವ ಚುನಾವಣಾ ಆಯೋಗದ ನ್ಯಾಯಸಮ್ಮತತೆ ಬಗ್ಗೆ ಪ್ರಶ್ನಿಸಿದ್ದಾರೆ.

"ಕಾಲಕಾಲಕ್ಕೆ ಕೆಲವೊಂದು ಪ್ರಕ್ರಿಯಾತ್ಮಕ ಕೆಲಸಗಳನ್ನು ಮಾಡಲೇಬೇಕು. ಆದರೆ, ಅದಕ್ಕಾಗಿ ಬಡವರ ಹಕ್ಕುಗಳನ್ನು ತುಳಿದು ಉತ್ತಮ ವ್ಯವಸ್ಥೆಯನ್ನು ನಿರ್ಮಿಸಲು ಸಾಧ್ಯವಿಲ್ಲ. ನ್ಯಾಯಯುತ ಮತ್ತು ಎಲ್ಲರನ್ನೂ ಒಳಗೊಳ್ಳುವ ಕ್ರಮದ ಅಗತ್ಯವಿದೆ. ಹಲವರು ತಮ್ಮ ಬಳಿ ಸರಿಯಾದ ದಾಖಲೆಗಳಿಲ್ಲದ ಕಾರಣಕ್ಕೆ ಚುನಾವಣಾ ಪ್ರಕ್ರಿಯೆಯಿಂದ ಹೊರಗುಳಿಯುತ್ತಿದ್ದಾರೆ" ಎಂದು ಅಮರ್ತ್ಯ ಸೇನ್ ಹೇಳಿದರು.

"ಹಲವರ ಬಳಿ ದಾಖಲೇಗಳೇ ಇಲ್ಲ. ಹಲವರಿಗೆ ಮತದಾನ ಮಾಡಲು ಸಾಧ್ಯವಾಗುತ್ತಿಲ್ಲ. ಸಣ್ಣ ಸುಧಾರಣೆ ತರುವ ನೆಪದಲ್ಲಿ ಹಲವರಿಗೆ ಅನ್ಯಾಯವಾದರೆ, ಅದು ಗಂಭೀರ ತಪ್ಪಾಗುತ್ತದೆ. ಒಂದು ತಪ್ಪನ್ನು ಸರಿಪಡಿಸಲು ನೀವು ಏಳು ಹೊಸ ತಪ್ಪುಗಳನ್ನು ಮಾಡುವುದು ಸಮರ್ಥಿಸಲು ಸಾಧ್ಯವಿಲ್ಲ" ಎಂದು ಅಮರ್ತ್ಯ ಸೇನ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News