×
Ad

ಮಹಾರಾಷ್ಟ್ರವಿಧಾನಸಭೆ ಚುನಾವಣೆ: ಬಿಜೆಪಿ ಪ್ರಣಾಳಿಕೆ ಬಿಡುಗಡೆ

Update: 2024-11-10 13:00 IST

Photo: PTI

ಮಹಾರಾಷ್ಟ್ರ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಿನ್ನೆಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಜೆಪಿಯ 'ಸಂಕಲ್ಪ ಪತ್ರ'ವನ್ನು ಬಿಡುಗಡೆ ಮಾಡಿದ್ದಾರೆ.

'ಸಂಕಲ್ಪ ಪತ್ರ' ಬಿಡುಗಡೆ ಸಂದರ್ಭದಲ್ಲಿ ಮಹರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ರಾಜ್ಯ ಬಿಜೆಪಿ ಮುಖ್ಯಸ್ಥ ಚಂದ್ರಶೇಖರ್ ಬವಾಂಕುಲೆ, ಮುಂಬೈ ಬಿಜೆಪಿ ಘಟಕದ ಮುಖ್ಯಸ್ಥ ಆಶಿಶ್ ಶೇಲಾರ್, ಕೇಂದ್ರ ಸಚಿವ ಪಿಯೂಷ್ ಗೋಯಲ್ ಮತ್ತು ಪಕ್ಷದ ಇತರ ಮುಖಂಡರು ಉಪಸ್ಥಿತರಿದ್ದರು.

ಸಂಕಲ್ಪ ಪತ್ರದಲ್ಲಿ ʼಲಡ್ಕಿ ಬಹಿನ್ʼ(Ladki Bahin) ಯೋಜನೆಯಡಿ ಮಹಿಳೆಯರಿಗೆ ಮಾಸಿಕ ನೆರವು ಹೆಚ್ಚಳ, ಮಹಾರಾಷ್ಟ್ರವನ್ನು ಕೃತಕ ಬುದ್ಧಿಮತ್ತೆ(AI) ಕೇಂದ್ರವನ್ನಾಗಿ ಮಾಡುವ ಯೋಜನೆ ಮತ್ತು ಅಗತ್ಯ ವಸ್ತುಗಳ ಬೆಲೆ ನಿಯಂತ್ರಣದ ಭರವಸೆಯನ್ನು ನೀಡಲಾಗಿದೆ.

ʼಲಡ್ಕಿ ಬಹಿನ್ʼ ಯೋಜನೆಯಡಿ ಮಾಸಿಕ ಸಹಾಯಧನ 1,500ರೂ.ನಿಂದ 2,100ಕ್ಕೆ ಹೆಚ್ಚಿಸುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ರೈತರ ಸಾಲ ಮನ್ನಾ, 25 ಲಕ್ಷ ಹೊಸ ಉದ್ಯೋಗ ಸೃಷ್ಟಿ, ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ವಿದ್ಯುತ್ ಬಿಲ್ಗಳಲ್ಲಿ ಶೇ. 30ರಷ್ಟು ರಿಯಾಯಿತಿ, ವೃದ್ಧಾಪ್ಯ ವೇತನ 2,100ಕ್ಕೆ ಹೆಚ್ಚಳ, 25,000 ಮಹಿಳಾ ಪೊಲೀಸರ ನೇಮಕಾತಿ, ಆಶಾ ಕಾರ್ಯಕರ್ತೆಯರಿಗೆ ಮಾಸಿಕ 15,000ರೂ. ಪ್ರೋತ್ಸಾಹಧನ, ಹಳ್ಳಿಗಳಿಗೆ ಉತ್ತಮ ರಸ್ತೆ ಸೇರಿ ವಿವಿಧ ಭರವಸೆಗಳನ್ನು ಬಿಜೆಪಿ ಸಂಕಲ್ಪ ಪತ್ರದಲ್ಲಿ ಉಲ್ಲೇಖಿಸಿದೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News