×
Ad

Amritsar | ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ

Update: 2025-12-12 22:37 IST

Photo Credit : PTI 

ಅಮೃತಸರ, ಡಿ. 12: ಇಲ್ಲಿನ ಹಲವು ಶಾಲೆಗಳಿಗೆ ಶುಕ್ರವಾರ ಬಾಂಬ್ ಬೆದರಿಕೆಯ ಈ ಮೇಲ್‌ಗಳು ಬಂದಿವೆ. ಇದರಿಂದ ಮಕ್ಕಳನ್ನು ಸ್ಥಳಾಂತರಿಸಲಾಯಿತು.

ಭಯಭೀತರಾದ ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗಲು ಶಾಲೆಗಳಿಗೆ ಧಾವಿಸಿದರು. ಅನಂತರ ಜಿಲ್ಲಾಡಳಿತ ಅಮೃತಸರದಲ್ಲಿರುವ ಎಲ್ಲಾ ಶಾಲೆಗಳನ್ನು ಮುಚ್ಚಲು ಆದೇಶಿಸಿತು.

‘‘ನಗರ ಹಾಗೂ ಗ್ರಾಮೀಣ ವಲಯದಲ್ಲಿರುವ ಕೆಲವು ಶಾಲೆಗಳು ಶಂಕಾಸ್ಪದ ಇಮೇಲ್‌ಗಳನ್ನು ಸ್ವೀಕರಿಸಿವೆ. ಪ್ರತಿ ಶಾಲೆಯಲ್ಲಿ ಗೆಝೆಟೆಡ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ’’ ಎಂದು ಪೊಲೀಸರು ತಿಳಿಸಿದ್ದಾರೆ.

ಸೈಬರ್ ಪೊಲೀಸ್ ಠಾಣೆಯ ಅಧಿಕಾರಿಗಳು ಇಮೇಲ್‌ ನ ಮೂಲವನ್ನು ಪತ್ತೆ ಹಚ್ಚಲು ಸಮರೋಪಾದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಅಮೃತಸರದ ಪೊಲೀಸ್ ಆಯುಕ್ತ ಗುರುಪ್ರೀತ್ ಸಿಂಗ್ ಭುಲ್ಲರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಹಿಂದೆ ಇಂತಹ ಕಿಡಿಗೇಡಿ ಕೃತ್ಯಕ್ಕೆ ಕೆಲವು ವಿದ್ಯಾರ್ಥಿಗಳು ಕಾರಣ ಎಂದು ತಿಳಿದು ಬಂದಿತ್ತು. ಪೊಲೀಸರು ಸಂಪೂರ್ಣವಾಗಿ ಮುನ್ನೆಚ್ಚರಿಕೆ ವಹಿಸಿದ್ದಾರೆ. ಆದುದರಿಂದ ಆಂತಕಗೊಳ್ಳುವ ಅಗತ್ಯ ಇಲ್ಲ ಎಂದು ಅವರು ಹೇಳಿದ್ದಾರೆ.

ಈ ಹಿಂದೆ ತನ್ನ ಶಾಲೆಗೆ ಬಾಂಬ್ ಬೆದರಿಕೆಯ ಇಮೇಲ್ ಕಳುಹಿಸಿರುವುದಕ್ಕೆ ಸ್ಥಳೀಯ ಡಿಎವಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಆತ ಹಾಗೂ ಆತನ ಹೆತ್ತವರು ಲಿಖಿತ ಕ್ಷಮಾಪಣೆ ಪತ್ರ ಸಲ್ಲಿಸಿದ ಬಳಿಕ ಬಿಟ್ಟು ಬಿಡಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News