ಸತತ 3ನೇ ವರ್ಷ ‘ಸಂಸದ ರತ್ನ’ ಪ್ರಶಸ್ತಿ ಪಡೆದ ಅಂಡಮಾನ್ ಕಾಂಗ್ರೆಸ್ ಸಂಸದ
Update: 2024-02-17 22:44 IST
Credit: PTI Photo
ಪೋರ್ಟ್ ಬ್ಲೇರ್ : ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹದ ಕಾಂಗ್ರೆಸ್ ಸಂಸದ ಕುಲ್ದೀಪ್ ರಾಯ್ ಶರ್ಮಾ ಅವರು ಸತತ ಮೂರನೇ ವರ್ಷ ‘ಸಂಸದ ರತ್ನ ’ ಪ್ರಶಸ್ತಿಯನ್ನು ಶನಿವಾರ ಸ್ವೀಕರಿಸಿದರು.
ದಿಲ್ಲಿಯ ಮಹಾರಾಷ್ಟ್ರ ಸದನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶರ್ಮಾ ಸೇರಿದಂತೆ ಐವರು ಸಂಸದರು ತಮ್ಮ ಅತ್ಯುತ್ತಮ ಸಾಧನೆಗಾಗಿ ಪ್ರಶಸ್ತಿಗಳನ್ನು ಪಡೆದುಕೊಂಡರು.
ಬಿಜೆಪಿಯ ಸುಕಾಂತ ಮಜುಮ್ದಾರ್ ಮತ್ತು ಸುಧೀರ್ ಗುಪ್ತಾ, ಶಿವಸೇನೆಯ ಶ್ರೀಕಾಂತ ಏಕನಾಥ ಶಿಂದೆ ಮತ್ತು ಎನ್ ಸಿ ಪಿ ಯ ಅಮೋಲ್ ರಾಮಸಿಂಗ್ ಕೊಲ್ಹೆ ಅವರು ಪ್ರಶಸ್ತಿಗೆ ಭಾಜನರಾದ ಇತರ ನಾಲ್ವರು ಸಂಸದರಾಗಿದ್ದಾರೆ.