×
Ad

ಅನಿಲ್ ಕುಂಬ್ಳೆ ದಾಖಲೆ ಮುರಿದ ಆರ್. ಅಶ್ವಿನ್

Update: 2024-03-09 18:12 IST

ಅನಿಲ್ ಕುಂಬ್ಳೆ , ಆರ್. ಅಶ್ವಿನ್ | Photo: PTI 

ಧರ್ಮಶಾಲಾ: ಇಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ನಡೆಯುತ್ತಿರುವ ಐದನೆ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತದ ಲೆಗ್ ಸ್ಪಿನ್ನರ್ ಆರ್.ಅಶ್ವಿನ್ ಮಹತ್ವದ ಸಾಧನೆಯೊಂದನ್ನು ಮಾಡಿದರು. ಬೆನ್ ಫೋಕ್ಸ್ ಅವರ ವಿಕೆಟ್ ಅನ್ನು ಕಬಳಿಸುವ ಮೂಲಕ, ಟೆಸ್ಟ್ ಪಂದ್ಯಗಳಲ್ಲಿ 36 ಬಾರಿ ಐದು ವಿಕೆಟ್ ಗೊಂಚಲನ್ನು ಕಿತ್ತ ಸಾಧನೆಗೆ ಭಾಜನರಾದರು.

ಇದಕ್ಕೂ ಮುನ್ನ ಭಾರತದ ಪರ ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ಬಾರಿ 5 ವಿಕೆಟ್ ಗಳನ್ನು ಕಿತ್ತ ದಾಖಲೆ ಅನಿಲ್ ಕುಂಬ್ಳೆ ಅವರ ಹೆಸರಿನಲ್ಲಿತ್ತು. ಅವರು 132 ಪಂದ್ಯಗಳಲ್ಲಿ 35 ಬಾರಿ ಆ ಸಾಧನೆ ಮಾಡಿದ್ದರು. ಹರ್ಭಜನ್ ಸಿಂಗ್ 103 ಪಂದ್ಯಗಳಲ್ಲಿ 25 ಬಾರಿ, ಕಪಿಲ್ ದೇವ್ 131 ಪಂದ್ಯಗಳಲ್ಲಿ 23 ಬಾರಿ ಹಾಗೂ ಬಿ.ಎಸ್. ಚಂದ್ರಶೇಖರ್ 58 ಪಂದ್ಯಗಳಲ್ಲಿ 16 ಬಾರಿ ಈ ಸಾಧನೆ ಮಾಡಿದ್ದಾರೆ.

ಇಂಗ್ಲೆಂಡ್ ನ ಎರಡನೆ ಇನಿಂಗ್ಸ್ ನಲ್ಲಿ ಆರ್.ಅಶ್ವಿನ್ ತೋರಿದ ಕೈಚಳಕದಿಂದ ಭಾರತ ತಂಡವು ಇನಿಂಗ್ಸ್ ಹಾಗೂ 64 ರನ್ ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಸರಣಿಯನ್ನು 4-1ರ ಅಂತರದಿಂದ ಕೈವಶ ಮಾಡಿಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News