×
Ad

ಕ್ಷಮೆ ಕೋರಿದ ‘ಅನ್ನಪೂರಣಿ’ ನಟಿ ನಯನತಾರಾ

Update: 2024-01-19 20:42 IST

ನಯನತಾರಾ | Photo: NDTV 

ಹೊಸದಿಲ್ಲಿ: ತನ್ನ ‘ಅನ್ನಪೂರಣಿ’ ಚಿತ್ರದ ಮೂಲಕ ‘‘ಹಿಂದೂಗಳ ಭಾವನೆಗಳಿಗೆ ಘಾಸಿಯುಂಟು ಮಾಡಿರುವುದಕ್ಕಾಗಿ’’ ನಟಿ ನಯನತಾರಾ ಗುರುವಾರ ಕ್ಷಮೆ ಕೋರಿದ್ದಾರೆ.

ಹಿಂದೂ ದೇವರು ರಾಮರನ್ನು ಮಾಂಸಾಹಾರಿ ಎಂಬಂತೆ ಚಿತ್ರದ ಕೆಲವು ದೃಶ್ಯಗಳು ಬಿಂಬಿಸಿವೆ ಎಂಬುದಾಗಿ ಕೆಲವು ಹಿಂದುತ್ವ ಗುಂಪುಗಳು ಆರೋಪಿಸಿದ ಬಳಿಕ ಜನವರಿ 11ರಂದು ಚಿತ್ರವನ್ನು

ನೆಟ್ ಫ್ಲಿಕ್ಸ್ ನಿಂದ ತೆಗೆಯಲಾಗಿತ್ತು.

ಡಿಸೆಂಬರ್ 1ರಂದು ಚಿತ್ರ ಬಿಡುಗಡೆಗೊಳ್ಳುವ ಮೊದಲು ಅದಕ್ಕೆ ಸೆನ್ಸಾರ್ ಪ್ರಮಾಣಪತ್ರವನ್ನು ಪಡೆಯಲಾಗಿತ್ತು ಎಂದು ಹೇಳಿರುವ ನಟಿ, ಡಿಜಿಟಲ್ ವೇದಿಕೆಯಿಂದ ಚಿತ್ರವನ್ನು ತೆಗೆದಿರುವುದು ಅನಿರೀಕ್ಷಿತವಾಗಿದೆ ಎಂದು ತಿಳಿಸಿದ್ದಾರೆ.

‘‘ಯಾರದೇ ಭಾವನೆಗಳಿಗೆ ಘಾಸಿ ಮಾಡುವ ಉದ್ದೇಶವನ್ನು ನನ್ನ ತಂಡ ಮತ್ತು ನಾನು ಎಂದೂ ಹೊಂದಿರಲಿಲ್ಲ. ವಿಷಯದ ಗಾಂಭೀರ್ಯತೆಯನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ’’ ಎಂಬುದಾಗಿ ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News