×
Ad

ಪಾಕ್ ರಾಯಭಾರಿ ಕಚೇರಿಯ ಇನ್ನೋರ್ವ ರಾಜತಾಂತ್ರಿಕನ ಉಚ್ಚಾಟನೆ

Update: 2025-05-21 22:41 IST

PC : PTI 

ಹೊಸದಿಲ್ಲಿ: ತನ್ನ ಅಧಿಕೃತ ಸ್ಥಾನಮಾನಕ್ಕೆ ಸೂಕ್ತವಲ್ಲದ ಚಟುವಟಿಕೆಗಳಲ್ಲಿ ತೊಡಗಿದ್ದರೆಂಬ ಆರೋಪದಲ್ಲಿ ಪಾಕ್ ರಾಯಭಾರಿ ಕಚೇರಿಯ ಅಧಿಕಾರಿಯೊಬ್ಬರನ್ನು ಭಾರತವು ಬುಧವಾರ ಉಚ್ಚಾಟಿಸಿದೆ.

ಅಧಿಕಾರಿಯು ದೇಶವನ್ನು ತೊರೆಯಲು 24 ತಾಸುಗಳ ಕಾಲಾವಕಾಶವನ್ನು ನೀಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘‘ಅಧಿಕೃತ ಸ್ಥಾನಮಾನಕ್ಕೆ ಅನುಗುಣವಾಗಿರದ ಚಟುವಟಿಕೆಗಳಲ್ಲಿ ತೊಡಗಿದಕ್ಕಾಗಿ ಹೊಸದಿಲ್ಲಿಯ ಪಾಕಿಸ್ತಾನ ರಾಯಭಾರಿ ಕಚೇರಿಯ ಪಾಕ್ ಅಧಿಕಾರಿಯೊಬ್ಬರನ್ನು ಅನಪೇಕ್ಷಿತರೆಂದು ಪರಿಗಣಿಸಲಾಗಿದೆ. 24 ತಾಸುಗಳೊಳಗೆ ಭಾರತವನ್ನು ತೊರೆಯುವಂತೆ ಅಧಿಕಾರಿಗೆ ತಿಳಿಸಲಾಗಿದೆ’’ ವಿದೇಶಾಂಗ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಈ ಬಗ್ಗೆ ಪಾಕ್ ರಾಯಭಾರಿ ಕಚೇರಿಯ ಉಸ್ತುವಾರಿ ಅಧಿಕಾರಿಯವರಿಗೆ ರಾಜತಾಂತ್ರಿಕ ಸೂಚನೆಯನ್ನು ನೀಡಲಾಗಿದೆ. ಭಾರತದಲ್ಲಿರುವ ಯಾವುದೇ ಪಾಕಿಸ್ತಾನಿ ರಾಜತಾಂತ್ರಿಕರು ಅಥವಾ ಅಧಿಕಾರಿಗಳು ತಮಗಿರುವ ಸವಲತ್ತುಗಳನ್ನು ಅಥವಾ ಸ್ಥಾನಮಾನವನ್ನು ದುರ್ಬಳಕೆ ಮಾಡಬಾರದೆಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಮೇ 13ರಂದು ಭಾರತ ಸರಕಾರವು ಪಾಕ್ ರಾಯಭಾರಿ ಕಚೇರಿಯ ಅಧಿಕಾರಿಯೊಬ್ಬರನ್ನು ಬೇಹುಗಾರಿಕೆಯ ಆರೋಪದಲ್ಲಿ ಉಚ್ಚಾಟಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News