×
Ad

ಕೇಜ್ರಿವಾಲ್‌ ಐಫೋನ್‌ ಅನ್‌ಲಾಕ್‌ ಮಾಡಲು ಈಡಿ ವಿನಂತಿಯನ್ನು ನಿರಾಕರಿಸಿದ ಆ್ಯಪಲ್:‌ ವರದಿ

Update: 2024-04-03 12:13 IST

ಅರವಿಂದ್ ಕೇಜ್ರಿವಾಲ್ | Photo: X 

ಹೊಸದಿಲ್ಲಿ: ಡಿವೈಸ್ ಮಾಲಕರು ಹೊಂದಿಸಿರುವ ಪಾಸ್ವರ್ಡ್ನಿಂದ ಮಾತ್ರ ಫೋನ್ ನಲ್ಲಿರುವ ಡೇಟಾವನ್ನು ಪರಿಶೀಲಿಸಬಹುದು ಎಂದು ಕಾರಣ ನೀಡಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಐಫೋನ್ ಅನ್ನು ಅನ್ಲಾಕ್ ಮಾಡಲು ಆ್ಯಪಲ್ ಸಂಸ್ಥೆ ನಿರಾಕರಿಸಿದೆ ಎಂದು ThePrint ವರದಿ ಮಾಡಿದೆ.

ಅಬಕಾರಿ ನೀತಿ ಹಗರಣದ ತನಿಖೆಯ ಭಾಗವಾಗಿ ಕೇಜ್ರಿವಾಲ್ ಅವರ ಫೋನ್ ಅನ್ನು ಅನ್ ಲಾಕ್ ಮಾಡಲು ʼಅನೌಪಚಾರಿಕವಾಗಿʼ ಈಡಿ ಆ್ಯಪಲ್ ಸಂಸ್ಥೆಯನ್ನು ಸಂಪರ್ಕಿಸಿದೆ, ಆದರೆ ಫೋನ್ ಅನ್ ಲಾಕ್ ಮಾಡಲು ಆ್ಯಪಲ್ ಸಂಸ್ಥೆ ನಿರಾಕರಿಸಿದೆ ಎಂದು ಈಡಿ ಮೂಲಗಳು ತಿಳಿಸಿರುವುದಾಗಿ ವರದಿ ಹೇಳಿದೆ.

ಕೇಜ್ರಿವಾಲ್ ಅವರ ನಿವಾಸದಲ್ಲಿ ಹಲವು ಗಂಟೆಗಳ ವಿಚಾರಣೆಯ ನಂತರ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 21 ರಾತ್ರಿ ಅವರನ್ನು ಬಂಧಿಸಲಾಯಿತು. ಬಂಧನವಾದ ರಾತ್ರಿ ಕೇಜ್ರಿವಾಲ್ ಅವರು ತಮ್ಮ ಐಫೋನ್ ಸ್ವಿಚ್ ಆಫ್ ಮಾಡಿ ಪಾಸ್ವರ್ಡ್ ಹಂಚಿಕೊಳ್ಳಲು ನಿರಾಕರಿಸಿದ್ದರು ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News