×
Ad

ಖಾಲಿಸ್ತಾನಿ ಭಯೋತ್ಪಾದಕರ ಮಟ್ಟ ಹಾಕಲು ಅಖಾಡ ಸಿದ್ಧ ; ಎನ್‌ಐಎಯಿಂದ 19 ದೇಶಭ್ರಷ್ಟರ ಪಟ್ಟಿ ಸಿದ್ಧ

Update: 2023-09-24 22:24 IST

ಸಾಂದರ್ಭಿಕ ಚಿತ್ರ| Photo: PTI

ಹೊಸದಿಲ್ಲಿ: ಖಾಲಿಸ್ತಾನಿ ಭಯೋತ್ಪಾದಕ ಹಾಗೂ ನಿಷೇಧಿತ ಪ್ರತ್ಯೇಕತಾವಾದಿ ಸಂಘಟನೆ ‘ಸಿಕ್ಖ್ ಫಾರ್ ಜಸ್ಟಿಸ್’ನ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನುನ್ ಸೊತ್ತನ್ನು ಮುಟ್ಟುಗೋಲು ಹಾಕಿಕೊಂಡ ಒಂದು ದಿನದ ಬಳಿಕ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದೇಶದಿಂದ ಪರಾರಿಯಾಗಿ ಬ್ರಿಟನ್, ಅಮೆರಿಕ, ಕೆನಡಾ, ದುಬೈ, ಪಾಕಿಸ್ತಾನ ಹಾಗೂ ಇತರ ದೇಶಗಳಲ್ಲಿ ಆಶ್ರಯ ಪಡೆದುಕೊಂಡಿರುವ 19 ಖಾಲಿಸ್ತಾನಿ ಭಯೋತ್ಪಾದಕರ ಪಟ್ಟಿಯನ್ನು ಸಿದ್ದಪಡಿಸಿದೆ. ಇವರ ಆಸ್ತಿಯನ್ನು ಕೂಡ ಎನ್‌ಐಎ ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಇವರ ವಿರುದ್ಧ ಕಠಿಣ ಭಯೋತ್ಪಾದನೆ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಈ ಭಯೋತ್ಪಾದಕರು ವಿದೇಶದಲ್ಲಿ ಭಾರತ ವಿರೋಧಿ ಪ್ರಚಾರ ಮಾಡುತ್ತಿದ್ದಾರೆ ಎಂದು ಎನ್‌ಐಎ ಹೇಳಿದೆ.

ಈ ಪಟ್ಟಿಯಲ್ಲಿ ಬ್ರಿಟನ್‌ನಲ್ಲಿರುವ ಪರಮ್‌ಜೀತ್ ಸಿಂಗ್ ಪಮ್ಮಾ, ಪಾಕಿಸ್ತಾನದಲ್ಲಿರುವ ವಾಧ್ವಾ ಸಿಂಗ್ ಬಬ್ಬರ್ ಆಲಿಯಾಸ್ ಚಾಚಾ, ಬ್ರಿಟನ್‌ನಲ್ಲಿರುವ ಕುಲ್ವಂತ್ ಸಿಂಗ್ ಮುಥ್ರಾ, ಅಮೆರಿಕದಲ್ಲಿರುವ ಜೇ ಧಲಿವಾಲ್, ಬ್ರಿಟನ್‌ನಲ್ಲಿರುವ ಸುಖ್ಪಾಲ್ ಸಿಂಗ್, ಅಮೆರಿಕದಲ್ಲಿರುವ ಹರ್‌ಪ್ರೀತ್ ಸಿಂಗ್ ಆಲಿಯಾಸ್ ರಾಣಾ ಸಿಂಗ್, ಬ್ರಿಟನ್‌ನಲ್ಲಿರುವ ಸರಬ್‌ಜಿತ್ ಸಿಂಗ್ ಬೆನ್ನುರ್, ಬ್ರಿಟನ್‌ನಲ್ಲಿರುವ ಕುಲ್ವಂತ್ ಸಿಂಗ್ ಆಲಿಯಾಸ್ ಕಾಂತಾ, ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಹರ್ದೀಪ್ ಸಿಂಗ್ ಆಲಿಯಾಸ್ ಜಪ್ಪಿ ಸಿಂಗ್, ಪಾಕಿಸ್ತಾನದ ಲಾಹೋರ್‌ನಲ್ಲಿರುವ ರಂಜಿತ್ ಸಿಂಗ್ ನೀತಾ, ಬ್ರಿಟನ್‌ನಲ್ಲಿರುವ ಗುರ್ಮೀತ್ ಸಿಂಗ್ ಆಲಿಯಾಸ್ ಬಗ್ಗಾ ಆಲಿಯಾಸ್ ಬಾಬಾ, ದುಬೈಯಲ್ಲಿರುವ ಜಸ್ಮಿತ್ ಸಿಂಗ್ ಹಕಿಂಝಾದಾ, ಆಸ್ಟ್ರೇಲಿಯಾದಲ್ಲಿರುವ ಗುರ್ಜಂತ್ ಸಿಂಗ್ ದಿಲ್ಲಾನ್, ಯುರೋಪ್ ಹಾಗೂ ಕೆನಡಾದಲ್ಲಿರುವ ಲಕ್ಬೀರ್ ಸಿಂಗ್ ರೋಡೆ, ಅಮೆರಿಕದ ಕ್ಯಾಲಿಪೋರ್ನಿಯಾದಲ್ಲಿರುವ ಅಮರ್‌ದೀಪ್ ಸಿಂಗ್ ಪೂರೆವಾಲ್, ಕೆನಡಾದಲ್ಲಿರುವ ಜತೀಂದರ್ ಸಿಂಗ್ ಗ್ರೇವಾಲ್, ಬ್ರಿಟನ್‌ನಲ್ಲಿರುವ ದುಪೀಂದರ್ ಜೀತ್ ಹಾಗೂ ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಎಸ್ ಹಿಮ್ಮತ್ ಸಿಂಗ್ ಸೇರಿದ್ದಾರೆ.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಶನಿವಾರ ಪಂಜಾಬ್‌ನ ಚಂಡಿಗಢದಲ್ಲಿರುವ ಪನ್ನುನ್ ನಿವಾಸ ಹಾಗೂ ಅಮೃತಸರದಲ್ಲಿರುವ ಅವರ ಸೊತ್ತನ್ನು ವಶಪಡಿಸಿಕೊಂಡಿತ್ತು. ಪನ್ನುನ್ ಪಂಜಾಬ್‌ನಲ್ಲಿ ಮೂರು ದೇಶದ್ರೋಹದ ಪ್ರಕರಣ ಸೇರಿದಂತೆ 22 ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾನೆ. ಇತ್ತೀಚೆಗೆ ಈತ ಭಾರತ-ಕೆನಡಾ ಸಂಜಾತ ವ್ಯಕ್ತಿಯೋರ್ವರಿಗೆ ದೇಶ ತ್ಯಜಿಸುವಂತೆ ಬೆದರಿಕೆ ಒಡ್ಡಿದ್ದ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News