×
Ad

"ಮರಾಠಿ ಅಥವಾ ಭೋಜ್‌ಪುರಿ?": ಹೊಸ ವರ್ಷಾಚರಣೆ ವೇಳೆ ಹಾಡು ಹಾಕುವ ವಿಚಾರಕ್ಕೆ ನಡೆದ ಘರ್ಷಣೆಯಲ್ಲಿ ಓರ್ವ ಮೃತ್ಯು

Update: 2025-01-03 12:52 IST

Photo credit: NDTV

ಮುಂಬೈ: ಮಹಾರಾಷ್ಟ್ರದ ಮೀರಾ ರೋಡ್‌ ನಲ್ಲಿ ಹೊಸ ವರ್ಷಾಚರಣೆ ವೇಳೆ ಹಾಡು ಹಾಕುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ನಡೆದ ವಾಕ್ಸಮರ ಹಿಂಸಾಚಾರಕ್ಕೆ ತಿರುಗಿದ್ದು, ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಜನವರಿ 1ರಂದು ಮುಂಜಾನೆ 3 ಗಂಟೆ ಸುಮಾರಿಗೆ ವಸತಿ ಸಮುಚ್ಚಯವೊಂದರಲ್ಲಿ ಹೊಸ ವರ್ಷಾಚರಣೆ ಹಿನ್ನೆಲೆ ಗುಂಪೊಂದು ಮರಾಠಿ ಹಾಡು ಹಾಕಿ ನೃತ್ಯ ಮಾಡುತ್ತಿತ್ತು, ಈ ವೇಳೆ ಇನ್ನೊಂದು ಗುಂಪು ಭೋಜ್ ಪುರಿ ಹಾಡುಗಳನ್ನು ಹಾಕುವಂತೆ ಒತ್ತಾಯಿಸಿದೆ. ಹಾಡು ಹಾಕುವ ವಿಚಾರಕ್ಕೆ ಪಾನಮತ್ತ ಗುಂಪುಗಳ ನಡುವೆ ನಡೆದ ವಾಕ್ಸಮರ ತಾರಕಕ್ಕೇರಿ ಜನರು ಬಿದಿರು ಮತ್ತು ಕಬ್ಬಿಣದ ರಾಡ್ ಗಳಿಂದ ಹೊಡೆದಾಡಿಕೊಂಡಿದ್ದಾರೆ.

ಘರ್ಷಣೆಯಲ್ಲಿ ರಾಜಾ ಪೆರಿಯಾರ್(23) ಎಂಬ ಯುವಕ ಮೃತಪಟ್ಟಿದ್ದಾನೆ. ಈತನ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಲಾಗಿತ್ತು. ಪೊಲೀಸರ ಪ್ರಕಾರ ಘಟನೆಯಲ್ಲಿ ಇನ್ನೋರ್ವ ಕೂಡ ಗಾಯಗೊಂಡಿದ್ದಾನೆ. ಆತನಿಗೆ ಮುಂಬೈನ ಕೆಇಎಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಕರಣಕ್ಕೆ ಸಂಬಂಧಿಸಿ ಆಶಿಶ್ ಜಾಧವ್ ಮತ್ತು ಆತನ ಸಂಬಂಧಿಕರಾದ ಅಮಿತ್ ಜಾಧವ್, ಪ್ರಕಾಶ್ ಜಾಧವ್ ಮತ್ತು ಪ್ರಮೋದ್ ಯಾದವ್ ಅವರನ್ನು ಬಂಧಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News