×
Ad

ಭೂ ದಾಳಿಗೆ ನಾವು ರೆಡಿ: ಪಾಕಿಸ್ತಾನಕ್ಕೆ ಸೇನಾ ಮುಖ್ಯಸ್ಥರ ಎಚ್ಚರಿಕೆ

Update: 2026-01-13 22:10 IST

 ಜ.ಉಪೇಂದ್ರ ದ್ವಿವೇದಿ |  Photo Credit : ANI 

ಹೊಸದಿಲ್ಲಿ, ಜ.13: ‘ಆಪರೇಷನ್ ಸಿಂಧೂರ’ ಈಗಲೂ ಮುಂದುವರಿದಿದೆ ಎಂದು ಮಂಗಳವಾರ ಇಲ್ಲಿ ಹೇಳಿದ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿಯವರು, ಭವಿಷ್ಯದಲ್ಲಿ ಯಾವುದೇ ದುಸ್ಸಾಹಸ ನಡೆದರೆ ಅದನ್ನು ದೃಢವಾಗಿ ಎದುರಿಸಲಾಗುವುದು ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದರು.

‘ನಿಯಂತ್ರಣ ರೇಖೆಯಾಚೆ (ಎಲ್‌ಒಸಿ) ಕನಿಷ್ಠ ಆರು ಮತ್ತು ಅಂತರರಾಷ್ಟ್ರೀಯ ಗಡಿಯಾಚೆ ಎರಡು ಭಯೋತ್ಪಾದಕ ಶಿಬಿರಗಳು ಈಗಲೂ ಸಕ್ರಿಯವಾಗಿವೆ. ಯಾವುದೇ ದುಷ್ಕೃತ್ಯಕ್ಕೆ ಮುಂದಾದರೆ ನಾವು ತಕ್ಕ ಉತ್ತರ ನೀಡುತ್ತೇವೆ’ ಎಂದು ಅವರು ಪಾಕಿಸ್ತಾನ ಸರ್ಕಾರಕ್ಕೆ ನೇರ ಎಚ್ಚರಿಕೆಯನ್ನು ರವಾನಿಸಿದರು.

ಸೇನಾ ದಿನದ ಅಂಗವಾಗಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜನರಲ್ ದ್ವಿವೇದಿ, ನಿರ್ಣಾಯಕವಾಗಿ ಪ್ರತಿಕ್ರಿಯಿಸಲು ಉನ್ನತ ಮಟ್ಟದಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು. ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯನ್ನು ಅತ್ಯಂತ ನಿಖರವಾಗಿ ರೂಪಿಸಿ ಕಾರ್ಯಗತಗೊಳಿಸಲಾಗಿತ್ತು ಎಂದರು.

‘ಆಪರೇಷನ್ ಸಿಂಧೂರ’ವನ್ನು ಜಂಟಿ ಕಾರ್ಯಾಚರಣೆಗಳಲ್ಲೊಂದು ಮೈಲಿಗಲ್ಲು ಎಂದು ಬಣ್ಣಿಸಿದ ಅವರು, ಸ್ಪಷ್ಟ ರಾಜಕೀಯ ನಿರ್ದೇಶನ ಮತ್ತು ಪ್ರತಿಕ್ರಿಯಿಸಲು ಸಂಪೂರ್ಣ ಸ್ವಾತಂತ್ರ್ಯದಡಿ ಮೂರೂ ಸಶಸ್ತ್ರ ಪಡೆಗಳ ಸಮನ್ವಯಕ್ಕೆ ಇದು ಅತ್ಯುತ್ತಮ ಉದಾಹರಣೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News