×
Ad

ಭಾರತದಲ್ಲಿ ಆಶ್ರಯ ಅರಸುತ್ತಿರುವ ಮ್ಯಾನ್ಮಾರ್ ಸೈನಿಕರು: ಕೇಂದ್ರದ ಸಹಾಯ ಕೋರಿದ ಮಿಜೋರಾಂ ಸರಕಾರ

Update: 2024-01-20 11:45 IST

Photo credit: NDTV

ಗುವಹಾಟಿ : ಮ್ಯಾನ್ಮಾರ್‌ನಲ್ಲಿ ಬಂಡುಕೋರ ಪಡೆಗಳು ಹಾಗೂ ಅಲ್ಲಿನ ಜುಂಟಾ ಆಡಳಿತದ ನಡುವೆ ಕಾದಾಟ ಮುಂದುವರಿದಿರುವಂತೆಯೇ ಮ್ಯಾನ್ಮಾರ್‌ನ ನೂರಾರು ಸೇನಾ ಸಿಬ್ಬಂದಿಗಳು ಭಾರತದತ್ತ ಪಲಾಯನಗೈಯ್ಯುತ್ತಿದ್ದಾರೆ. ಈ ಬೆಳವಣಿಗೆ ಕುರಿತಂತೆ ಮಿಜೋರಾಂ ಸರ್ಕಾರ ಕೇಂದ್ರದ ಗಮನ ಸೆಳೆದಿದ್ದು ಮ್ಯಾನ್ಮಾರ್‌ನ ಸೈನಿಕರನ್ನು ಅವರ ದೇಶಕ್ಕೆ ಕಳುಹಿಸಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದೆ.

ಮ್ಯಾನ್ಮಾರ್‌ನಲ್ಲಿ ಕಾಳಗ ತೀವ್ರಗೊಳ್ಳುತ್ತಿರುವಂತೆಯೇ ಅಲ್ಲಿನ ಸುಮಾರು 600 ಸೈನಿಕರು ಭಾರತಕ್ಕೆ ಆಗಮಿಸಿದ್ಧಾರೆ ಹಾಗೂ ಮಿಜೋರಾಂನ ಲಾನ್ಗಟ್ಲೈ ಎಂಬಲ್ಲಿ ಅಸ್ಸಾಂ ರೈಫಲ್ಸ್‌ ಶಿಬಿರದಲ್ಲಿ ಆಶ್ರಯ ಪಡೆದಿದ್ಧಾರೆ. ಮ್ಯಾನ್ಮಾರ್‌ನಲ್ಲಿ ಅವರ ಶಿಬಿರಗಳನ್ನು ಅರಕನ್‌ ಆರ್ಮಿ ತೀವ್ರಗಾಮಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಶಿಲ್ಲಾಂಗ್‌ನಲ್ಲಿ ಈಶಾನ್ಯ ಮಂಡಳಿ ಸಭೆಯಲ್ಲಿ ಈ ಸಮಸ್ಯೆ ಕುರಿತಂತೆ ಮಿಜೋರಾಂ ಸಿಎಂ ಲಲ್ಡುಹೋಮಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಚರ್ಚೆ ನಡೆಸಿದ್ದಾರೆ.

ಈ ಸಮಸ್ಯೆ ಕುರಿತು ಮಾತನಾಢಿದ ಮಿಜೋರಾಂ ಸಿಎಂ “ಜನರು ಮ್ಯಾನ್ಮಾರ್‌ ತೊರೆದು ನಮ್ಮ ದೇಶಕ್ಕೆ ಬರುತ್ತಿದ್ದಾರೆ. ಮಾನವೀಯ ನೆಲೆಯಲ್ಲಿ ಅವರಿಗೆ ಸಹಾಯ ಮಾಡುತ್ತಿದ್ದೇವೆ. ಸೈನಿಕರು ಬರುತ್ತಿದ್ದಾರೆ ಹಾಗೂ ಆಶ್ರಯ ಕೋರುತ್ತಿದ್ದಾರೆ. ಹಿಂದೆ ವಿಮಾನ ಮೂಲಕ ವಾಪಸ್‌ ಕಳಿಸುತ್ತಿದ್ದೆವು. ಈಗಾಗಲೇ ಸುಮಾರು 450 ಮಂದಿಯನ್ನು ವಾಪಸ್‌ ಕಳಿಸಲಾಗಿದೆ,” ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News