×
Ad

ಅಸ್ಸಾಂ | ಒಂಭತ್ತು ಕೋಟಿ ರೂ.ಮೌಲ್ಯದ ಹೆರಾಯಿನ್ ವಶ, ನಾಲ್ವರ ಬಂಧನ

Update: 2025-01-14 20:47 IST

PC : ANI 

ಗುವಾಹಟಿ: ಮಂಗಳವಾರ ಅಸ್ಸಾಮಿನ ಕಾಮರೂಪ ಜಿಲ್ಲೆಯಲ್ಲಿ ಒಂಭತ್ತು ಕೋಟಿ ರೂ.ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡಿರುವ ಪೋಲಿಸರು ನಾಲ್ವರನ್ನು ಬಂಧಿಸಿದ್ದಾರೆ.

ಮಣಿಪುರದ ಚುರಾಚಂದ್ರಪುರ ಜಿಲ್ಲೆಯಿಂದ ಹಾಜೋ ಮತ್ತು ಗೋರೇಶ್ವರ ಪ್ರದೇಶಗಳಲ್ಲಿಯ ಪೆಡ್ಲರ್‌ಗಳಿಗೆ ಪೂರೈಸಲು ವಾಹನದಲ್ಲಿ ಮಾದಕದ್ರವ್ಯಗಳನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಪಡೆದಿದ್ದ ರಾಜ್ಯ ಪೋಲಿಸರ ವಿಶೇಷ ಕಾರ್ಯಪಡೆಯು ಅಮಿನಗಾಂವ್ ಪ್ರದೇಶದಲ್ಲಿ ವಾಹನವನ್ನು ತಡೆದು, 94 ಸೋಪ್ ಬಾಕ್ಸ್‌ಗಳಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ 1.128 ಕೆ.ಜಿ. ಹೆರಾಯಿನ್ ವಶಪಡಿಸಿಕೊಂಡಿದೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

ಚಾಲಕ ಮತ್ತು ಸಹಚಾಲಕನ್ನು ಬಂಧಿಸಲಾಗಿದ್ದು, ವಿಚಾರಣೆ ಸಂದರ್ಭ ಅವರು ನೀಡಿದ ಮಾಹಿತಿ ಮೇರಗೆ ಹಾಜೋ ಮತ್ತು ಗೋರೇಶ್ವರಗಳಲ್ಲಿಯ ಇಬ್ಬರು ಪೆಡ್ಲರ್‌ಗಳನ್ನೂ ಬಂಧಿಸಲಾಗಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News