×
Ad

ಅಸ್ಸಾಂನಲ್ಲಿ ಲಘು ಭೂಕಂಪನ

Update: 2025-02-27 21:25 IST

ಸಾಂದರ್ಭಿಕ ಚಿತ್ರ

ಗುವಾಹಟಿ: ಅಸ್ಸಾಂನ ಕೇಂದ್ರ ಭಾಗದಲ್ಲಿ ರಿಕ್ಟರ್ ಮಾಪಕದಲ್ಲಿ 5 ತೀವ್ರತೆಯ ಭೂಕಂಪನ ಗುರುವಾರ ಮುಂಜಾನೆ ಸಂಭವಿಸಿದೆ ಎಂದು ಅಧಿಕೃತ ಬುಲೆಟಿನ್ ತಿಳಿಸಿದೆ.

ಯಾರೊಬ್ಬರಿಗೂ ಗಾಯಗಳಾದ ಹಾಗೂ ಯಾವುದೇ ಸೊತ್ತಿಗೆ ಹಾನಿ ಉಂಟಾದ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ರಹ್ಮಪುತ್ರ ನದಿಯ ದಕ್ಷಿಣ ದಂಡೆಯಲ್ಲಿರುವ ಮೊರಿಗಾಂವ್ ಜಿಲ್ಲೆಯಲ್ಲಿ 16 ಕಿ.ಮೀ. ಆಳದಲ್ಲಿ ಮುಂಜಾನೆ 2.25ಕ್ಕೆ ಭೂಕಂಪನ ಸಂಭವಿಸಿತು ಎಂದು ರಾಷ್ಟ್ರೀಯ ಭೂಕಂಪ ಅಧ್ಯಯನ ಕೇಂದ್ರದ ವರದಿ ಹೇಳಿದೆ.

ಭೂಕಂಪನ ಕೇಂದ್ರಬಿಂದು ಗುವಾಹಟಿಯಿಂದ ಸುಮಾರು 52 ಕಿ.ಮೀ. ಪೂರ್ವದಲ್ಲಿತ್ತು ಎಂದು ಅದು ಹೇಳಿದೆ.

ನೆರೆಯ ಕಾಮರೂಪ್ ಮಹಾನಗರ, ನಾಗಾಂವ್, ಪೂರ್ವ ಕರ್ಬಿ ಅಂಗ್ಲಾಂಗ್, ಪಶ್ಚಿಮ ಕರ್ಬಿ ಅಂಗ್ಲಾಂಗ್, ಹೋಜೈ, ದಿಮಾ ಹಸಾವೋ, ಗೋಲಾಘಾಟ್, ಜೊರ್ಹಾತ್, ಶಿವಸಾಗರ್, ಕಾಚರ್, ಕರೀಮಗಂಜ್, ಹೈಲಖಂಡಿ, ಧುಬ್ರಿ, ದಕ್ಷಿಣ ಸಲ್ಮಾರಾ-ಮಂಕಾಚಾರ್ ಹಾಗೂ ಗೋಲಪಾರ ಜಿಲ್ಲೆಗಳಲ್ಲಿ ಭೂಕಂಪನದ ಅನುಭವವಾಗಿದೆ.

ಇದಲ್ಲದೆ ಬ್ರಹ್ಮಪುತ್ರ ನದಿಯ ಉತ್ತರ ದಂಡೆಯಲ್ಲಿರುವ ದರ್ರಾಂಗ್, ತಾಮುಲ್ಪುರ, ಸೋನಿತ್‌ಪುರ, ಕಾಮರೂಪ್, ಬಿಸ್ವನಾಥ್, ಉದಲ್ಗುರಿ, ನಲ್ಬರಿ, ಬಜಾಲಿ, ಬಾರ್ಪೇಟಾ, ಬಕ್ಸಾ, ಚಿರಂಗ್, ಕೊಕ್ರಝಾರ್, ಬೊಂಗಾಯಿಗಾಂವ್ ಹಾಗೂ ಲಖಿಂಪುರದಲ್ಲಿ ಕೂಡ ಈ ಭೂಕಂಪದ ಅನುಭವವಾಗಿದೆ.

ಮಧ್ಯ ಪಶ್ಚಿಮ ಅರುಣಾಚಲ ಪ್ರದೇಶದ ಕೆಲವು ಪ್ರದೇಶಗಳು, ಸಂಪೂರ್ಣ ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿರೆರಾಮ್, ತ್ರಿಪುರಾ ಹಾಗೂ ಪಶ್ಚಿಮಬಂಗಾಳದ ಹಲವು ಪ್ರದೇಶಗಳಲ್ಲಿ ಭೂಕಂಪನದ ಅನುಭವ ಉಂಟಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News