ಅಸ್ಸಾಂ:ಜೈಲಿನ ಆವರಣದೊಳಗೆ ಮಾನಸಿಕ ಅಸ್ವಸ್ಥೆಯ ಮೇಲೆ ಸಾಮೂಹಿಕ ಅತ್ಯಾಚಾರ; ಇಬ್ಬರು ವಾರ್ಡರ್ ಗಳ ಸೆರೆ
Update: 2025-05-24 20:37 IST
ಸಾಂದರ್ಭಿಕ ಚಿತ್ರ
ಗುವಾಹಟಿ: ನಿರಾಶ್ರಿತ ಮಾನಸಿಕ ಅಸ್ವಸ್ಥ ಯುವತಿಯನ್ನು ಜಿಲ್ಲಾ ಕಾರಾಗೃಹದ ಆವರಣದೊಳಗೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ ಆರೋಪದಲ್ಲಿ ಇಬ್ಬರು ವಾರ್ಡರ್ ಗಳನ್ನು ಬಂಧಿಸಿರುವ ಘಟನೆ ಅಸ್ಸಾಮಿನ ಶ್ರೀಭೂಮಿ ಜಿಲ್ಲೆಯಲ್ಲಿ ನಡೆದಿದೆ.
ವಾರ್ಡರ್ ಗಳು ಶನಿವಾರ ನಸುಕಿನ 1:30ರ ಸುಮಾರಿಗೆ ಬೀದಿಯಲ್ಲಿ ಅಲೆದಾಡುತ್ತಿದ್ದ ಮಾನಸಿಕ ಅಸ್ವಸ್ಥೆಯನ್ನು ಜೈಲಿನ ಆವರಣದೊಳಗೆ ಎಳೆದೊಯ್ದಿದ್ದರು. ಗಸ್ತು ತಂಡವು ಅವರಿಬ್ಬರನ್ನೂ ಬಂಧಿಸಿದೆ.
ಹರೇಶ್ವರ ಕಲಿಟಾ(45) ಮತ್ತು ಗಜೇಂದ್ರ ಕಲಿಟಾ(50) ಬಂಧಿತ ಆರೋಪಿಗಳಾಗಿದ್ದು, ಗುವಾಹಟಿ ನಿವಾಸಿಗಳಾಗಿದ್ದಾರೆ.
ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದ್ದು, ಮುಂದಿನ ತನಿಖೆಯು ನಡೆಯುತ್ತಿದೆ. ಮಾನಸಿಕ ಅಸ್ವಸ್ಥೆಯಾಗಿರುವ ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆ ಬೀದಿಯಲ್ಲಿ ಒಂಟಿಯಾಗಿದ್ದಳು ಎಂದು ಶಂಕಿಸಲಾಗಿದ್ದು, ಆರೋಪಿಗಳು ಇದರ ಲಾಭ ಪಡೆದಿದ್ದರು ಎಂದು ಎಎಸ್‌ಪಿ ಪ್ರಣವಜ್ಯೋತಿ ಕಲಿಟಾ ತಿಳಿಸಿದರು.