×
Ad

ಅಸ್ಸಾಂ | 1,400 ಗ್ರಾಮೀಣ ಶಾಲೆಗಳಲ್ಲಿ ಕುಡಿಯುವ ನೀರು, ಶೌಚಾಲಯ ಸೌಲಭ್ಯಗಳ ಕೊರತೆ

Update: 2025-11-27 21:21 IST

ಸಾಂದರ್ಭಿಕ ಚಿತ್ರ | Photo Credit : freepik.com

ಗುವಾಹಟಿ,ನ.27: ಅಸ್ಸಾಮಿನ ಸುಮಾರು 1,400 ಸರಕಾರಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳು ಕುಡಿಯುವ ನೀರು ಮತ್ತು ಶೌಚಾಲಯ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿವೆ ಎಂದು ರಾಜ್ಯ ಸರಕಾರವು ಗುರುವಾರ ವಿಧಾನಸಭೆಯಲ್ಲಿ ತಿಳಿಸಿದೆ.

ಈ ಪ್ರದೇಶಗಳಲ್ಲಿಯ ಸರಕಾರಿ ಶಾಲೆಗಳಲ್ಲಿ ಸುಮಾರು 28,000 ಶಿಕ್ಷಕ ಹುದ್ದೆಗಳು ಖಾಲಿಯಿವೆ ಎಂದೂ ಅದು ಹೇಳಿದೆ.

ಕಾಂಗ್ರೆಸ್ ಶಾಸಕ ವಾಜಿದ್ ಅಲಿ ಚೌಧುರಿ ಅವರ ಪ್ರಶ್ನೆಗೆ ಉತ್ತರಿಸಿದ ಅಸ್ಸಾಂ ಶಿಕ್ಷಣ ಸಚಿವ ರನೋಜ್ ಪೆಗು ಅವರು ಈ ವಿಷಯವನ್ನು ತಿಳಿಸಿದರು.

347 ಶಾಲೆಗಳಲ್ಲಿ ಕುಡಿಯುವ ನೀರಿನ ಮತ್ತು 809 ಶಾಲೆಗಳಲ್ಲಿ ಶೌಚಾಲಯ ಸೌಲಭ್ಯಗಳ ಸಂಪೂರ್ಣ ಕೊರತೆಯಿದೆ ಎಂದು ತಿಳಿಸಿದ ಅವರು, 134 ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮತ್ತು 101 ಶಾಲೆಗಳಲ್ಲಿ ಶೌಚಾಲಯಗಳು ಪ್ರಸ್ತುತ ಕಾರ್ಯಾಚರಿಸುತ್ತಿಲ್ಲ ಎಂದರು.

ಈ ಶಾಲೆಗಳಿಗೆ ಕುಡಿಯುವ ನೀರು ಮತ್ತು ಶೌಚಾಲಯ ಸೌಲಭ್ಯಗಳನ್ನು ಒದಗಿಸಲು ಸಂಬಂಧಿಸಿದ ಇಲಾಖೆಗಳು ಶ್ರಮಿಸುತ್ತಿವೆ ಎಂದು ತಿಳಿಸಿದ ಪೆಗೊ, ಈ ಪ್ರದೇಶಗಳಲ್ಲಿಯ ಶಾಲೆಗಳಲ್ಲಿ ಒಟ್ಟು 27,936 ಶಿಕ್ಷಕರ ಹುದ್ದೆಗಳು ಖಾಲಿಯಿದ್ದು, ಈ ಪೈಕಿ 4,500 ಪ್ರಾಥಮಿಕ ಶಾಲಾ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಪ್ರೌಢ ಶಿಕ್ಷಣ ನಿರ್ದೇಶನಾಲಯವೂ 9,717 ಶಿಕ್ಷಕರ ನೇಮಕಾತಿಗೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News