×
Ad

ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ 30 ನಿಮಿಷಗಳಲ್ಲಿ ಹೈದರಾಬಾದ್ ಅನ್ನು ʼಭಾಗ್ಯನಗರ್ʼ ಎಂದು ಮರುನಾಮಕರಣ: ಅಸ್ಸಾಂ ಸಿಎಂ

Update: 2023-11-24 16:35 IST

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ (PTI)

ಹೈದರಾಬಾದ್: ಬಿಜೆಪಿ ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದಿದ್ದೇ ಆದಲ್ಲಿ, ಅಧಿಕಾರಕ್ಕೆ ಬಂದ 30 ನಿಮಿಷಗಳೊಳಗೆ ಹೈದರಾಬಾದ್ ಅನ್ನು ʼಭಾಗ್ಯನಗರ್ʼ ಎಂದು ಮರುನಾಮಕರಣಗೊಳಿಸಲಾಗುವುದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಹೇಳಿದ್ದಾರೆ.

ಬುಧವಾರ ಅವರು ಹೈದರಾಬಾದ್ ನ ಹಳೆ ನಗರದಲ್ಲಿ ಚುನಾವಣಾ ಪ್ರಚಾರ ರ‍್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

“ಹೈದರಾಬಾದ್ ಅನ್ನು ಭಾಗ್ಯನಗರ್ ಎಂದು ಮರುನಾಮಕರಣಗೊಳಿಸಬೇಕೆಂದು ನಾನು ಅಂದುಕೊಂಡಿದ್ದೇನೆ. ಬಿಜೆಪಿ ಸರ್ಕಾರ ರಚನೆಯಾದಾಗ ಅದನ್ನು 30 ನಿಮಿಷಗಳಲ್ಲಿ ಮಾಡಲಾಗುವುದು ಮತ್ತು ಯಾರು ಕೂಡ ವಿರೋಧಿಸುವ ಧೈರ್ಯ ತೋರಲಾರರು. ಕೆಲ ವಿಷಯಗಳು ಅಸಾಧ್ಯವೆನಿಸುತ್ತದೆ… ಹಳೆ ನಗರಕ್ಕೆ ಮೆಟ್ರೋ ರೈಲು ದೊರಕಬಹುದೇ? ಕೆಲ ಜನರ ಜಮೀನುಗಳನ್ನು ನಾವು ಸ್ವಾಧೀನಪಡಿಸಬಹುದೇ? ಕೆಲ ಜನರು ಬಹಿರಂಗವಾಗಿ ಪೊಲೀಸರಿಗೆ ಬೆದರಿಕೆಯೊಡ್ಡಿದಾಗ ನಾವು ಅದನ್ನು ನಿಲ್ಲಿಸಬಹುದೇ?” ಎಂದು ಇತ್ತೀಚೆಗೆ ಎಐಎಂಐಎಂ ಮುಖ್ಯಸ್ಥ ಅಕ್ಬರುದ್ದೀನ್ ಉವೈಸಿ ಅವರನ್ನೊಳಗೊಂಡ ಘಟನೆಯನ್ನು ಉಲ್ಲೇಖಿಸಿ ಶರ್ಮ ಹೇಳಿದರು. “ಒಮ್ಮೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ, ಈ ವಿಷಯಗಳನ್ನು 30 ನಿಮಿಷಗಳಲ್ಲಿ ಮಾಡಲಾಗುವುದು,” ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News