×
Ad

ಅಸ್ಸಾಂ ಪ್ರವಾಹ ಪರಿಸ್ಥಿತಿ ಉಲ್ಬಣ: ಮೃತರ ಸಂಖ್ಯೆ 78ಕ್ಕೆ ಏರಿಕೆ

Update: 2024-07-08 14:12 IST

Photo: PTI

ದಿಸ್ಪುರ್: ಈಶಾನ್ಯ ರಾಜ್ಯವಾದ ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಉಲ್ಬಣಗೊಂಡಿರುವುದರಿಂದ, ಪ್ರವಾಹಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ ರವಿವಾರ 78ಕ್ಕೆ ಏರಿಕೆಯಾಗಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ರವಿವಾರದಂದೂ ಕೂಡಾ ಎಂಟು ಮಂದಿ ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಈ ಪೈಕಿ ಧುಬ್ರಿ ಮತ್ತು ನಲ್ಬರಿ ಜಿಲ್ಲೆಗಳಲ್ಲಿ ತಲಾ ಇಬ್ಬರು ಮೃತಪಟ್ಟಿದ್ದರೆ, ಕಚರ್, ಗೋಲ್‌ಪುರ, ಧೇಮ್ಜಿ ಹಾಗೂ ಶಿವ್‌ಸಾಗರ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಾರ್ತಾಪತ್ರದಲ್ಲಿ ತಿಳಿಸಲಾಗಿದೆ.

ಅಸ್ಸಾಂ ರಾಜ್ಯದ 28 ಜಿಲ್ಲೆಗಳ ಒಟ್ಟು 22,74,289 ಮಂದಿ ಪ್ರವಾಹ ಪರಿಸ್ಥಿತಿಯಿಂದ ಸಂತ್ರಸ್ತರಾಗಿದ್ದಾರೆ. ಪ್ರವಾಹ ಪರಿಸ್ಥಿತಿಯಿಂದ ಧುಬ್ರಿ ಜಿಲ್ಲೆಯು ತೀವ್ರವಾಗಿ ಭಾಧಿತವಾಗಿದ್ದು, ಇಲ್ಲಿ ಒಟ್ಟು 7,54,791 ಮಂದಿ ಪ್ರವಾಹ ಪರಿಸ್ಥಿತಿಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಲಾಗಿದೆ.

ಉಳಿದಂತೆ, ಕಾಮ್‌ರೂಪ್, ನಾಗಾಂವ್, ಹೈಲಕಾಂಡಿ, ಬೊಂಗಾಯ್‌ಗಾಂವ್, ದಕ್ಷಿಣ ಸಲ್ಮಾರ, ದಿಬ್ರುಗಢ್, ಕರೀಂಗಂಜ್, ಲಖೀಪುರ್, ಹೊಜೈ, ನಲ್ಬರಿ, ಚರೈಡಿಯೊ, ಬಿಸ್ವನಾಥ್, ಗೋಲಾಘಾಟ್, ಜೋರ್ಹತ್, ಧೇಮಾಜಿ, ಬಾರ್ಪೇಟಾ, ಸೋನಿಪತ್, ಕೋಕ್ರಝಾರ್, ಮಜುಲಿ, ಕಾಮ್‌ರೂಪ್ (ಎಂ), ದರ್ರಾಂಗ್, ಶಿವಸಾಗರ್, ಚಿರಂಗ್ ಹಾಗೂ ತಿನ್ಸುಕಿಯ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News