×
Ad

ಉತ್ತರಾಖಂಡ | ಭೂಕುಸಿತದಿಂದ ಸುರಂಗದೊಳಗೆ ಸಿಲುಕಿಕೊಂಡ 19 ಮಂದಿ ಎನ್‌ಎಚ್‌ಪಿಸಿ ಕಾರ್ಮಿಕರು

Update: 2025-08-31 21:31 IST

 ಸಾಂದರ್ಭಿಕ ಚಿತ್ರ | PC : PTI 

 

ಪಿತೋರಗಢ (ಉತ್ತರಾಖಂಡ): ಉತ್ತರಾಖಂಡದ ಪಿತೋರಗಢದಲ್ಲಿ ನಡೆಯುತ್ತಿರುವ ಧುಲಿಯಾಗಂಜ್ ವಿದ್ಯುತ್ ಯೋಜನೆಯ ಸಾಮಾನ್ಯ ಹಾಗೂ ತುರ್ತು ನಿರ್ಗಮನದ ಎರಡೂ ಸುರಂಗಗಳು ಭೂಕುಸಿತದಿಂದ ಮುಚ್ಚಿ ಹೋಗಿರುವುದರಿಂದ, ಸುರಂಗದೊಳಗಿನ ವಿದ್ಯುದಾಗಾರದಲ್ಲಿ ರಾಷ್ಟ್ರೀಯ ಜಲವಿದ್ಯುಚ್ಛಕ್ತಿ ನಿಗಮ ನಿಯಮಿತದ 19 ಮಂದಿ ಕಾರ್ಮಿಕರು ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಧರ್ಚುಲಾ ಜಿಲ್ಲಾಧಿಕಾರಿ ಜಿತೇಂದ್ರ ವರ್ಮ, ಅವಶೇಷಗಳನ್ನು ತೆರವುಗೊಳಿಸಲು ಯಂತ್ರಗಳನ್ನು ನಿಯೋಜಿಸಲಾಗಿದ್ದು, ಸಂಜೆ ವೇಳೆಗೆ ಅವಶೇಷಗಳು ತೆರವುಗೊಳ್ಳಲಿವೆ. ಇದಾದ ನಂತರವಷ್ಟೇ ಎಲ್ಲ ಕಾರ್ಮಿಕರು ಸುರಂಗದಿಂದ ಹೊರ ಬರಲು ಸಾಧ್ಯೆವಾಗಲಿದೆ ಎಂದು ತಿಳಿಸಿದ್ದಾರೆ.

ಅವಶೇಷಗಳು ನಿರಂತರವಾಗಿ ಕುಸಿಯುತ್ತಿದ್ದರೂ, ಗಡಿ ರಸ್ತೆಗಳ ಸಂಘಟನೆಯ ಜೆಸಿಬಿ ಯಂತ್ರಗಳಿಂದ ಮಾರ್ಗವನ್ನು ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ಹೇಳಿದ್ದಾರೆ.

ಎಲ್ಲ ಕಾರ್ಮಿಕರೂ ಸುರಕ್ಷಿತವಾಗಿದ್ದು, ವಿದ್ಯುದಾಗಾರದ ಮಾರ್ಗ ತೆರೆದುಕೊಂಡ ಕೂಡಲೇ ಅವರೆಲ್ಲ ಹೊರ ಬರಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಇದೇ ವೇಳೆ, ವಿದ್ಯುತ್ ಯೋಜನೆಯ ವಿದ್ಯುತ್ ಉತ್ಪಾದನೆ ಸಹಜವಾಗಿ ಮುಂದುವರಿದಿದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News