×
Ad

ನಾಳೆಯಿಂದ ಎಟಿಎಂ ಶುಲ್ಕ ಹೆಚ್ಚಳ

Update: 2025-04-30 21:25 IST

PC : freepik.com

ಹೊಸದಿಲ್ಲಿ: ಭಾರತೀಯ ರಿಸರ್ವ್ ಬ್ಯಾಂಕ್‌ನ ನಿರ್ದೇಶನದಂತೆ ಗ್ರಾಹಕರ ಎಟಿಎಂ ಬಳಕೆಗೆ ವಿಧಿಸಲಾಗುವ ಪರಿಷ್ಕೃತ ಶುಲ್ಕ ದರವು ಮೇ 1ರಿಂದ ಜಾರಿಗೆ ಬರಲಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಉಚಿತ ಮಿತಿಯಿಂದಾಚೆಗೆ ಎಟಿಎಂನಿಂದ ನಗದು ಹಿಂಪಡೆಯುವಿಕೆ (ವಿತ್‌ಡ್ರಾ) ತುಟ್ಟಿಯಾಗಲಿದೆ.

ಉಚಿತ ವಹಿವಾಟಿನ ಮಿತಿಯಿಂದಾಚೆಗೆ ಗ್ರಾಹಕನಿಗೆ ಪ್ರತಿ ವಿತ್‌ ಡ್ರಾಗೂ ಗರಿಷ್ಠ 23 ರೂ.ವರೆಗೆ ಶುಲ್ಕವನ್ನು ವಿಧಿಸಲಾಗುವುದು. ಈ ಮಿತಿಯು ವಿತ್ತಿಯ ಹಾಗೂ ಹಣಕಾಸೇತರ ವಹಿವಾಟುಗಳಿಗೂ ಅನ್ವಯವಾಗಲಿದೆ. ಇದರ ಜೊತೆಗೆ ಅನ್ವಯಿಕ ತೆರಿಗೆಗಳನ್ನು ಕೂಡಾ ಪ್ರತ್ಯೇಕವಾಗಿ ವಿಧಿಸಲಾಗುವುದು.

ಆರ್‌ಬಿಐನ ಈ ಕ್ರಮವು ಸಣ್ಣ ಬ್ಯಾಂಕ್‌ಗಳ ಮೇಲೆ ತೀವ್ರ ಪರಿಣಾಮವನ್ನು ಬೀರುವ ಸಾಧ್ಯತೆಯಿದೆ. ಸಣ್ಣ ಬ್ಯಾಂಕುಗಳು ಹೆಚ್ಚಿನ ಎಟಿಎಂ ಯಂತ್ರಗಳನ್ನು ಹೊಂದಿರದೆ ಇರುವುದಿಂದ ಅವುಗಳ ಗ್ರಾಹಕರು ನಗದು ವಹಿವಾಟಿಗೆ ದೊಡ್ಡ ಬ್ಯಾಂಕ್‌ಗಳ ಎಟಿಎಂಗಳನ್ನು ಅವಲಂಭಿಸುತ್ತಾರೆ. ಅನ್ಯ ಬ್ಯಾಂಕ್‌ಗಳ ಎಟಿಎಂಗಳಿಂದ ಹಣ ವಿತ್‌ಡ್ರಾ ಹಾಗೂ ಬ್ಯಾಲೆನ್ಸ್ ಪರಿಶೀಲನೆಗೆ ಅವರು ಅಧಿಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಪ್ರಸಕ್ತ ಮೆಟ್ರೋ ನಗರಗಳಲ್ಲಿ ಮಾಸಿಕವಾಗಿ ಮೂರು ಸಲ ಹಾಗೂ ಇತರ ನಗರಗಳಲ್ಲಿ ಐದು ಬಾರಿ ಎಟಿಎಂನಿಂದ ನಗದನ್ನು ಉಚಿತವಾಗಿ ವಿತ್‌ ಡ್ರಾ ಮಾಡಬಹುದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News